ಹುಬ್ಬಳ್ಳಿ: ಕರ್ನಾಟಕ ಮಟಿರಿಯಲ್ ಟೆಸ್ಟಿಂಗ್ ಅಂಡ್ ಸೆಂಟರ್ ಸಂಸ್ಥೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಇಂಡಸ್ಟ್ರಿಯಲ್ ವಸಾಹತುವಿನಲ್ಲಿರುವ G4, G5 ಶೆಡ್ಡುಗಳನ್ನು 99 ವರ್ಷಗಳ ಕಾಲ ಲೀಸ್ ಗೆ ನೀಡುವ ಪತ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಇಂದು ತಮ್ಮ ನಿವಾಸದಲ್ಲಿ ಹಸ್ತಾಂತರಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನದಡಿಯಲ್ಲಿ ಸ್ಥಾಪಿಸಿದ ಕರ್ನಾಟಕ ಮಟಿರಿಯಲ್ ಟೆಸ್ಟಿಂಗ್ ಅಂಡ್ ಸೆಂಟರ್ ಸಂಸ್ಥೆ ಎನ್.ಎ.ಬಿ.ಎಲ್ (ನ್ಯಾಷಿನಲ್ ಅಕ್ರಿಡಿಯೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅ್ಯಂಡ್ ಕ್ಯಾಲಿಬರೇಷನ್ ಲ್ಯಾಬೋರೇಟರಿಸ್) ಪ್ರಮಾಣ ಪತ್ರ ಹೊಂದಿದೆ. ಕಳೆದ 25 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಕೈಗಾರಿಕೆಗಳಿಗೆ, ವಸ್ತುಗಳ ಗುಣಮಟ್ಟ ಪರೀಕ್ಷಿಸಿ ಕೊಡುತ್ತಿದೆ. ಲೀಸ್ ಪತ್ರ ನೀಡುವ ಮುಖಾಂತರ ಪರೀಕ್ಷಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಸರ್ಕಾರ ಒತ್ತು ನೀಡಿದೆ. ಉದ್ದಿಮೆದಾರರ ಬೇಡಿಕೆಗೆ ಅನುಸಾರವಾಗಿ ಇನ್ನೂ ಹೆಚ್ಚಿನ ಪ್ರಮಾಣದ ಟೆಸ್ಟಿಂಗ್ ಅನುಕೂಲತೆಯನ್ನು ಒದಗಿಸಲು ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು.
ಈ ಸಂದರ್ಭದಲ್ಲಿ ಕೆ.ಎಸ್.ಎಸ್.ಐ.ಡಿ.ಸಿ ಅಧಿಕಾರಿ ಡಿ.ಹೆಚ್.ನಾಗೇಶ್, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ಮೋಹನ ಭರಮಕ್ಕನವರ ಸೇರಿದಂತೆ ಮತ್ತಿತರರು ಇದ್ದರು.