ಮಂಗಳೂರು: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳ ನಡುವೆ ಭಾನುವಾರ ಶಾರ್ಜಾದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಪರ ಆಟಗಾರ ನಿಕೋಲಸ್ ಪೂರನ್ ಅವರ ಅದ್ಭುತ ಫೀಲ್ಡಿಂಗ್ ಒಂದು ಕ್ರಿಕೆಟ್ ಪ್ರಿಯರ ಮನಗೆದ್ದಿದೆ.
ವಿಶೇಷವೆಂದರೆ ಈ ಫೀಲ್ಡಿಂಗ್ನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ತುಳುವಿನ ಬರವಣಿಗೆಯ ಮೂಲಕ ತುಳುವರ ಮನಗೆದ್ದಿದೆ. ನಿಕೋಲಸ್ ಪೂರನ್ ಅವರು ಸಿಕ್ಸರ್ನತ್ತ ಸಾಗುತ್ತಿದ್ದ ಬಾಲ್ನ್ನು ಅರ್ಧದಲ್ಲೇ ತಡೆಗಟ್ಟಿ ಅದ್ಭುತ ಫೀಲ್ಡಿಂಗ್ ನಡೆಸಿದ್ದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಕೂಡ ಈ ಫೀಲ್ಡಿಂಗ್ನ್ನು ತನ್ನ ಕ್ರಿಕೆಟ್ ಜೀವನದಲ್ಲಿ ಕಂಡ ಅತ್ಯದ್ಭುತ ಫೀಲ್ಡಿಂಗ್ ಎಂದು ಬಣ್ಣಿಸಿದ್ದರು.
ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ…! ??? #RRvKXIP https://t.co/2dJ6C5VIQU
— Star Sports Kannada (@StarSportsKan) September 27, 2020
ಈ ಕ್ಷಣವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ತನ್ನ ಟೈಟಲ್ನಲ್ಲಿ ತುಳು ಭಾಷೆ ಬಳಸುವ ಮೂಲಕ ವಿಶೇಷ ಗಮನ ಸೆಳೆದಿದೆ. ಟ್ವೀಟ್ನಲ್ಲಿ `ಶೇ…ಎಂಚಿನ ಫೀಲ್ಡಿಂಗ್ ಮಾರ್ರೆ..!’(ಛೇ…ಎಂತಹ ಫೀಲ್ಡಿಂಗ್)ಎಂದು ತುಳು ಭಾಷೆಯಲ್ಲಿ ಪ್ರಶಂಸಿಸುವ ಮೂಲಕ ತುಳುವರ ಮನಗೆದ್ದಿದೆ. ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.