ಶೇ.100 ರಷ್ಟು ಸಾಲ ಮರುಪಾವತಿ ಮಾಡಲಿರುವ ಕಿಂಗ್ ಫಿಶರ್ ಒಡೆಯ ವಿಜಯ್ ಮಲ್ಯ

0
96

ಹೊಸದಿಲ್ಲಿ: ಭಾರತೀಯ ಬ್ಯಾಂಕ್ ಗಳಲ್ಲಿ ಪಡೆದ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲು ಸಿದ್ಧ ಎಂದು ವಿಜಯ್ ಮಲ್ಯ ಇಂದು ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಕೊರೋನಾ ಸೋಂಕಿನಿಂದ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳ ಬೇಕು ಮನೆಯಲ್ಲಿಯೇ ಇದ್ದು ಕುಟುಂಬ ಮತ್ತು ತಮ್ಮ ಸಾಕು ಪ್ರಾಣಿಗಳ ಜೊತೆ ಆನಂದದಿಂದ ಸಮಯ ಕೆಳೆಯಬೇಕು. ನಾನು ಕೂಡ ಮನೆಯಲ್ಲಿಯೇ ಇದ್ದೇನೆ. ನಾವೆಲ್ಲರೂ ದೈರ್ಯಶಾಲಿಗಳು ಅಜ್ಞಾತ ಶತ್ರುವಿನೊಡನೆ ಹೋರಾಟ ಮಾಡುವುದು ಯೋಗ್ಯವಲ್ಲ. ಇದು ಪುಲ್ವಾಮ ಅಥವಾ ಕಾರ್ಗಿಲ್ ನಂತಹ ಯುದ್ಧವಲ್ಲ ಎಂದು ಟ್ವೀಟ್ ಮಾಡಿದರು.

ದೇಶದಲ್ಲಿ ಊಹಿಸಲಾಗದ ಲಾಕ್ ಡೌನ್ ನಿರ್ಧಾರವನ್ನು ಕೇಂದ್ರ ಸರ್ಕರ ಕೈಗೊಂಡಿದೆ, ಲಾಕ್ ಡೌನ್ ನಿಂದ ನನ್ನ ಕಂಪನಿಗಳ ಕೆಲಸಗಳು ಸ್ಥಗಿತಗೊಂಡಿದೆ, ಆದರೆ ಯಾವುದೇ ನೌಕರರನ್ನು ಮನೆಗೆ ಕಳುಹಿಸಿ ವೇತನ ನೀಡುತ್ತಿಲ್ಲ, ಈ ಹಿನ್ನಲೆ ಸರ್ಕಾರ ನಮಗೆ ಸಹಾಯ ಮಾಡಬೇಕು ಎಂದರು

ಬಳಿಕ ಹಣ ಮರುಪಾವತಿಯ ಕುರಿತು ಟ್ವೀಟ್ ಮಾಡಿದ ವಿಜಯ್ ಮಲ್ಯ: ನಮ್ಮ ಕಂಪನಿಯ ದಾಖಲೆಗಳನ್ನು ಬಿಡುಗಡೆ ಮಾಡಲು ಜಾರಿ ನಿರ್ದೇಶನಾಲಯವು ಮುಂದಾಗಿಲ್ಲ ಮತ್ತು ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ವಿಶ್ವದಾದ್ಯಂತ ಕೊರೋನಾ ಸೋಂಕಿನಿಂದ ಬಳಲುತ್ತಿರುವ ಸಮಯದಲ್ಲಾದರೂ ಭಾರತೀಯ ಹಣಕಾಸು ಇಲಾಖೆಯಾದರೂ ನನ್ನ ಮನವಿಗೆ ಸ್ಪಂದಿಸುತ್ತದೆ ಎಂದು ಭರವಸೆ ಹೊಂದಿದ್ದೇನೆ.

ಬೇಸರ ವ್ಯಕ್ತಪಡಿಸಿದ ವಿಜಯ್ ಮಲ್ಯಾ, ನಾವು ಹಣ ಪಾವತಿಸಲು ಮುಂದಾದರು ಬ್ಯಾಂಕ್ ಗಳು ಹಣ ತೆಗೆದುಕೊಳ್ಳಲು ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here