Monday, July 4, 2022

Latest Posts

ಶೇ.20ರಷ್ಟು ಸೂಕ್ಷ್ಮ – ಸಣ್ಣ ಉದ್ಯಮಗಳ ಪುನರುಜ್ಜೀವನಕ್ಕೆ ಕೊರೋನಾ ಎಫೆಕ್ಟ್: ಕಾಸಿಯಾ ಆತಂಕ

ಮೈಸೂರು: ಕೊರೋನಾದಿಂದಾಗಿ ಸಂಕಷ್ಟದಿoದ ಶೇ.೨೦ರಷ್ಟು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಪುನರುಜ್ಜೀವನಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಅರಸಪ್ಪ ತಿಳಿಸಿದರು.
ಮಂಗಳವಾರ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉದ್ಯಮಗಳು ತಮ್ಮ ಕಾರ್ಯಾಚರಣೆಯನ್ನು ಪುನರುಜ್ಜೀವನಗೊಳಿಸಲು ಇಸಿಎಲ್ ಜಿಎಸ್ ಯೋಜನೆಯಡಿಯಲ್ಲಿ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳಿoದ ಸಾಲ ಪಡೆಯಲು ಅನುವಾಗುವಂತೆ ಕೇಂದ್ರ ಸರ್ಕಾರವು ಸಾಕಷ್ಟು ಪ್ರಮಾಣದ ಹಣಕಾಸು ಲಭ್ಯತೆಯನ್ನು ಒದಗಿಸಿದೆ. ಪಾವತಿಗಳ ಮೇಲಿನ ಮೊರೊಟೋರಿಯಂ, ನಿಗದಿತ ಮಾಸಿಕ ವಿದ್ಯುತ್ ಶುಲ್ಕದಂತಹ ಕೆಲವು ಪಾವತಿಗಳನ್ನು ಮನ್ನಾ ಮಾಡುವುದು ಮತ್ತು ಅನುಸರಣೆ ಅವಶ್ಯಕತೆಗಳನ್ನು ಸರಾಗಗೊಳಿಸುವ ಕ್ರಮಗಳ ಮೂಲಕ ಉದ್ಯಮವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ರೀತಿಯಲ್ಲಿ ಬೆಂಬಲಿಸಿವೆ. ಆದಾಗ್ಯೂ ಕೈಗೊಂಡ ಕ್ರಮಗಳು ಅಸಮರ್ಪಕವೆಂದು ಭಾವಿಸಲಾಗಿದೆ ಎಂದರು. ಎಂಎಸ್ ಎಂಇಗಳು ತಮ್ಮ ಕಾರ್ಯಾಚರಣೆಯನ್ನು ಪುನರುಜ್ಜೀವನಗೊಳಿಸಿ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲು ಕಾಸಿಯಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕೋರಿದೆ ಎಂದರು.
ಎಎಸ್ ಎಂಇ ಗಳ ಪ್ರಮುಖ ಕಾಳಜಿಯ ಸಮಸ್ಯೆಗಳ ಕುರಿತಂತೆ ಉದ್ಯಮಗಳಿಗೆ ಪರಿಹಾರಗಳನ್ನು ಪಡೆಯುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಕಾಸಿಯಾ ನಿರಂತರ ಸಂಪರ್ಕದಲ್ಲಿದ್ದು, ಉದ್ಯಮ ಬೇಡಿಕೆಗಳಿಗೆ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂಬ ತೃಪ್ತಿ ನಮಗಿದೆ ಎಂದರು.
ಮುoದುವರಿಯುತ್ತಿರುವ ಕೊರೋನಾ ಸೋಂಕು ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ತುರ್ತು ಕ್ರೆಡಿಟ್ ಲಿಂಕ್ ಗ್ಯಾರಂಟಿ ಯೋಜನೆಯಡಿ ಸಾಲ ಪಡೆಯಲು ಎನ್ ಎಂಎ -೨ಘಟಕಗಳನ್ನು ಪರಿಗಣಿಸಬೇಕು, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಬಾಡಿಗೆ ಮತ್ತು ಯುಟಿಲಿಟಿ ಬಿಲ್ ಗಳನ್ನು ಒಂದು ಅವಧಿಗೆ ನೇರ ನಗದು ಪಾವತಿಸುವುದನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss