Sunday, July 3, 2022

Latest Posts

ಶ್ಯಾಮ್ ಸಿಂಗ ರಾಯ್ ಜೋಡಿಯಾಗಿ ಸಾಯಿ ಪಲ್ಲವಿ? ನಾಣಿ ಜೊತೆ ಮತ್ತೆ ಸ್ಕ್ರೀನ್ ಶೇರ್ ಮಾಡಲಿರುವ ಪ್ರೇಮಂ ಸುಂದರಿ

ನಟಿ ಸಾಯಿ ಪಲ್ಲವಿ ಈಗಾಗಲೆ ಹಲವಾರು ಸಿಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಮಲಯಾಳಂ ಸೂಪರ್ ಹಿಟ್ ಪ್ರೇಮ್ ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಟಿ ಸಾಯಿ ಪಲ್ಲವಿ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಿರತರಾಗಿದ್ದಾರೆ .ನಾಗ ಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಸಾಯಿ ಪಲ್ಲವಿ ಈಗ ಶ್ಯಾಮ್ ಸಿಂಗ ರಾಯ್ ಗೆ ಜೋಡಿಯಾಗಲು ರೆಡಿಯಾಗಿದ್ದಾರೆ  . ಶ್ಯಾಮ್ ಸಿಂಗ್ ರಾಯ್ ತೆಲುಗು ನಟ ನಾನಿ ಅಭಿನಯದ ಸಿನಿಮಾ. ಈ ಮೊದಲು ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿತು. ಆದರೀಗ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರಂತೆ. ಶ್ಯಾಮ್ ಸಿಂಗ ರಾಯ್ ನ್ಯೂಚುಲ್ ಸ್ಟಾರ್ ನಾನಿ ಅಭಿನಯದ ಸಿನಿಮಾ. ಶ್ಯಾಮ್ ಸಿಂಗ ರಾಯ್ ಗೆ ನಾಯಕಿಯಾಗಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ ಎನ್ನುವ ಮಾತು ಹೇಳಿಬರುತ್ತಿದೆ. ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯಸಿಯಾಗಿರುವ ಸಾಯಿ ಮತ್ತೆ ನಾನಿಗೆ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.ನಟಿ ಸಾಯಿ ಮತ್ತು ನಾನಿ ಈಗಾಗಲೆ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎಂಸಿಎ ಸಿನಿಮಾದಲ್ಲಿ ನಾನಿಗೆ ನಾಯಕಿಯಾಗಿ ನಟಿಸಿದ್ದ ಸಾಯಿ ಪಲ್ಲವಿ, ಶ್ಯಾಮ್ ಸಿಂಗ ರಾಯ್ ಗೆ ಆಯ್ಕೆ ಆಗುವ ಮೂಲಕ ಮತ್ತೆ ಎರಡನೇ ಬಾರಿ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.ನಾನಿ ಮತ್ತು ಸಾಯಿ ಪಲ್ಲವಿ ಅಭಿನಯದ ಶ್ಯಾಮ್ ಸಿಂಗ ರಾಯ್, ಟ್ಯಾಕ್ಸಿವಾಲ ಸಿನಿಮಾ ಖ್ಯಾತಿಯ ನಿರ್ದೇಶಕ ರಾಹುಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲ ನಿರೀಕ್ಷೆ ಯಶಸ್ಸು ಕಾಣಲಿಲ್ಲ. ಈಗ ನಾನಿ ಜೊತೆ ಶ್ಯಾಮ್ ಸಿಂಗ ರಾಯ್ ಸಿನಿಮಾ ಮಾಡುತ್ತಿದ್ದಾರೆ. ಅಂದುಕೊಂಡತೆ ಆಗಿದ್ದರೆ ಸಿನಿಮಾ ಈ ವರ್ಷದ ಕೊನೆಯಲ್ಲಿ ಕ್ರಿಸ್ ಮಸ್ ಗೆ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಿನಿಮಾ ಡಿಸೆಂಬರ್ ಗೆ ಬರುವುದು ಅನುಮಾನ.ನಟಿ ಸಾಯಿ ಪಲ್ಲವಿ ಅಳೆದುತೂಗಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪಾತ್ರಕೆಕ ತೂಕವಿದ್ದರೆ ಮಾತ್ರ ಆ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ. ಸದ್ಯ ಸಾಯಿ ಪಲ್ಲವಿ ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ರಾಣಾ ದಗ್ಗುಬಾಟಿ ಜೊತೆ ವಿರಾಟಪರ್ವಂ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss