Friday, July 1, 2022

Latest Posts

ಶ್ರೀಎಡನೀರು ಮಠದ ನೂತನ ಉತ್ತರಾಧಿಕಾರಿಯಾಗಿ ಶ್ರೀಸಚ್ಚಿದಾನಂದಭಾರತೀ ಸ್ವಾಮೀಜಿ ಪೀಠಾರೋಹಣ: ವಿವಿಧ ಮಠ ಸಂಸ್ಥಾನಗಳಿಂದ ಗೌರವ ಸಮರ್ಪಣೆ

ಉಡುಪಿ: ಕರ್ನಾಟಕದ ಗಡಿ ಜಿಲ್ಲೆ ಕಾಸರಗೋಡಿನ ಸಮೀಪದ ಪ್ರಾಚೀನ‌ ಧರ್ಮಪೀಠ ಶ್ರೀಎಡನೀರು ಮಠದ ನೂತನ ಉತ್ತರಾಧಿಕಾರಿಯಾಗಿ ಬುಧವಾರ ಪೀಠಾರೋಹಣಗೈದ ಶ್ರೀಸಚ್ಚಿದಾನಂದಭಾರತೀ ಸ್ವಾಮೀಜಿ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ, ಪೇಜಾವರ ಮಠ ಸಹಿತ ವಿವಿಧ ಮಠ ಸಂಸ್ಥಾನಗಳ ವತಿಯಿಂದ ಪಟ್ಟದ ಗೌರವಗಳು ಸಮರ್ಪಣೆಯಾದವು.

ಕರ್ನಾಟಕ ರಾಜ್ಯ ಸರಕಾರದ ಪರವಾಗಿ ಹಿಂದು ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ರಾಜ್ಯ ಸರಕಾರದ ಪರವಾಗಿ ಭಕ್ತಿ ಗೌರವ ಸಹಿತ ಮುಖ್ಯಮಂತ್ರಿಯವರ ಶುಭ ಸಂದೇಶವನ್ನು ಅರ್ಪಿಸಿದರು.

ಕೇಂದ್ರದ ಸರಕಾರದ ಪರವಾಗಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ಸಂಸದೀಯ ವ್ಯವಹಾರ ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರು ಕಳಿಸಿದ ಶುಭ ಸಂದೇಶ ಪತ್ರಗಳನ್ನೂ ಸಚಿವ ಕೋಟ ಹಸ್ತಾಂತರಿಸಿದರು.

ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸಹಿತ ಗಣ್ಯರು ಉಪಸ್ಥಿತರಿದ್ದರು.
ವಿಶ್ವ ಹಿಂದು ಪರಿಷತ್ತಿನ ಪರವಾಗಿ ರಾಷ್ಟ್ರೀಯ ಉಪಾಧ್ಯಕ್ಷ ಜೀವೇಶ್ವರ ಮಿಶ್ರ ಅವರು ಕಳಹಿಸಿದ ಸಂದೇಶವನ್ನು ಪೇಜಾವರ ಮಠದ ದಿವಾನ ಎಂ. ರಘುರಾಮಾಚಾರ್ಯರು ಸಲ್ಲಿಸಿದರು. ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್, ಎಸ್.ವಿ. ಭಟ್, ವಾಸುದೇವ ಭಟ್ ಪೆರಂಪಳ್ಳಿ ಜೊತೆಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss