Saturday, July 2, 2022

Latest Posts

ಶ್ರೀಕೃಷ್ಣಮಠ ದ್ವೈವಾರ್ಷಿಕ ಪರ್ಯಾಯ ಪಂಚ ಶತಮಾನೋತ್ಸವ: ಉಡುಪಿಗೆ ಆಗಮಿಸಿದ ಸಿಎಂ ಬಿ.ಎಸ್’ವೈ

ಹೊಸದಿಗಂತ ವರದಿ,ಉಡುಪಿ:

ಇಲ್ಲಿನ ಶ್ರೀಕೃಷ್ಣಮಠದಲ್ಲಿ ವಿಶಿಷ್ಟವಾದ ಪೂಜಾ ಪರ್ಯಾಯ ವ್ಯವಸ್ಥೆಯನ್ನು ವಾದಿರಾಜ ಗುರು ಸಾರ್ವಭೌಮರು 2ವರ್ಷಕ್ಕೆ ಪರಿಷ್ಕರಿಸಿ ಐದು ಶತಮಾನಗಳಾದ ಹಿನ್ನೆಲೆಯಲ್ಲಿ ದ್ವೈವಾರ್ಷಿಕ ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಡುಪಿಗೆ ಆಗಮಿಸಿದ್ದಾರೆ.

ಆದಿ ಉಡುಪಿ ಹೆಲಿ ಪ್ಯಾಡ್ ಗೆ ಆಗಮಿಸಿದ ಮುಖ್ಯಮಂತ್ರಿಯವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ ಮೊದಲಾದವರು ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss