Saturday, July 2, 2022

Latest Posts

ಶ್ರೀಗಂಧ ಕಳವು ಪ್ರಕರಣ: ಬರೋಬ್ಬರಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಹೊಸ ದಿಗಂತ ವರದಿ, ಕುಶಾಲನಗರ:

ಇಲ್ಲಿಗೆ ಸಮೀಪದ ಸೀಗೆಹೊಸೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದಿಂದ ಶ್ರೀಗಂಧ ಕಳ್ಳತನ ನಡೆಸಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಸೀಗೆಹೊಸೂರು ಗ್ರಾಮದ ಮೀಸಲು ಅರಣ್ಯದಿಂದ 2012ನೇ ಸಾಲಿನಲ್ಲಿ ಶ್ರೀ ಗಂಧದ ಮರ ಕಳ್ಳತನ ನಡೆದಿತ್ತು. ಈ ಸಂಬಂಧ ಅಂದಿನ ಕುಶಾಲನಗರ ವಲಯ ಅರಣ್ಯ ಅಧಿಕಾರಿ ವಿ.ಆರ್. ಕಾರ್ಯಪ್ಪ ದೂರು ದಾಖಲಿಸಿದ್ದರು.
ಅದರಂತೆ ತನಿಖೆ ನಡೆಸಿದ ಕುಶಾಲನಗರ ಪೊಲೀಸರು, ಆರೋಪಿ ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಸಮೀಪದ ನಂದಿಗುಡ್ಡ ಕಾವಲು ಗ್ರಾಮದ ಬಸವರಾಜು ಎಂಬಾತನನ್ನು ಬಂಧಿಸಿದ್ದಾರೆ.
ತಮಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಸಹಾಯಕ ಪೊಲೀಸ್ ಅಧಿಕಾರಿ ರವಿ ಮತ್ತು ಸಿಬ್ಬಂದಿ ಶ್ರೀನಿವಾಸ್ ಅವರುಗಳು ಕುಶಾಲನಗರದ ಕೊಪ್ಪಗೇಟ್ ಹತ್ತಿರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪ್ರಕರಣದ ಇಬ್ಬರು ಅರೋಪಿಗಳು ಈಗಾಗಲೇ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss