Saturday, August 13, 2022

Latest Posts

ಶ್ರೀದೇವಿ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ : ಚೆಕ್ ವಿತರಿಸಿದ ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ: ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆ ನೀರಿನ ಸೇಳವಿನಲ್ಲಿ ತೇಲಿಹೋಗಿ ಮೃತಪಟ್ಟ 8 ವರ್ಷದ ಬಾಲಕಿ ಶ್ರೀದೇವಿ ಗಾಣಗೇರ ಕುಟುಂಬಕ್ಕೆ ಸರ್ಕಾರದ ರೂ.5 ಲಕ್ಷ ಪರಿಹಾರದ ಚೆಕ್‌ನನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿತರಿಸಿದರು.
ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ಶೋಧನಾ ಕಾರ್ಯದಿಂದ ಬಾಲಕಿಯ ಶವ ಪತ್ತೆಯಾಗಿದ್ದು, ಸಚಿವ ಪ್ರಹ್ಲಾದ ಜೋಶಿ ಅವರು ಮನೆಗೆ ಭೇಟಿನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಶಾಸಕ ಸಿ.ಎಂ ನಿಂಬ್ಬಣವರ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಗಂಜಿಗಟ್ಟಿ ಕಲಘಟಗಿ ಮದ್ಯದ ಲೋಕೊಪಯೋಗಿ ರಸ್ತೆಯ ದುರಸ್ಥಿಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಡಿವೈಎಸ್‌ಪಿ ರವಿ ನಾಯಕ್, ಸಿಪಿಐ ವಿಜಯ್ ಬಿರಾದಾರ, ಮುಖಂಡರಾದ ಬಸವರಾಜ ಕುಂದಗೊಳಮಠ ಹನುಮಂತಪ್ಪ ಗಾಣಿಗೇರ, ಕುಟುಂಬಸ್ಥರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss