ಹೊಸದಿಗಂತ ಆನ್ಲೈನ್ ಡೆಸ್ಕ್:
ಈ ಅವಧಿಯ ಅತೀ ಕಡಿಮೆ ತಾಪಮಾನ ಶ್ರೀನಗರದಲ್ಲಿ ಶನಿವಾರ ದಾಖಲಾಗಿದೆ.
ಶನಿವಾರ ಶ್ರೀನಗರದಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 6.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಡಿ. 17ರಂದು ಮೈನಸ್ 6.4 ಡಿ.ಸೆ. ಇದ್ದ ಕನಿಷ್ಠ ತಾಪಮಾನ ಡಿ. 18ರಂದು ಮೈನಸ್ 6.6ಕ್ಕೆ ಇಳಿದಿದೆ. ಇನ್ನು 2019ರ ಡಿ. 30 ಮತ್ತು 2019ರ ಡಿ. 21ರಂದು ಮೈನಸ್ 6.5 ಡಿ. ಸೆ. ಕನಿಷ್ಠ ತಾಪಮಾನ ವರದಿಯಾಗಿತ್ತು.
ಸಾಮಾನ್ಯವಾಗಿ ಇಲ್ಲಿ ಈ ಅವಧಿಯಲ್ಲಿ ತೀವ್ರ ಚಳಿ ಇರುತ್ತದೆ. ಇದು ಮುಂದಿನ 40 ದಿನಗಳವರೆಗೂ ಇರುತ್ತದೆ. ಆದರೆ ಈಗಲೇ ಮೈನಸ್ 6.6 ಡಿ.ಸೆ. ಕನಿಷ್ಠ ತಾಪಮಾನ ವರದಿ ಆಗಿರುವುದು, ಸದ್ಯದಲ್ಲೇ ಅದು ಇನ್ನೂ ಹೆಚ್ಚಿನ ಮಟ್ಟಕ್ಕೆ ಕುಸಿಯುವ ಸೂಚನೆ ನೀಡಿದೆ.