ಶ್ರೀನಗರ: ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗುತ್ತಲೇ ಇದೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕೊರೋನಾ ಸೋಂಕಿತರೊಬ್ಬರು ಸಾವನ್ನಪ್ಪಿದ್ದಾರೆ.
65 ವರ್ಷದ ಮೃತ ವ್ಯಕ್ತಿ ಶ್ರೀನಗರದ ಹೈದೆರಾಪುರದ ನಿವಾಸಿಯಾಗಿದ್ದರು. ಕೊರೋನಾ ಸೋಂಕಿನ ಪರಿಣಾಮ ಕೆಲವು ದಿನಗಳಿಂದ ಶ್ರೀನಗರದ ದಾಲ್ ಗೇಟ್ ನ ಎದೆರೋಗಿಗಳ ಆಸ್ಪತ್ರೆಗೆ ದಾಖಲಾಗಿದ್ದರು.ಇವರನ್ನು ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿಸಿ ಚಿಕಿತ್ಸೆ ನೀಲಾಗುತ್ತಿತ್ತು. ಈ ವ್ಯಕ್ತಿ ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಯೋಜನಾ ಆಯೋಗದ ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ 10 ಕೊರೋನಾ ಸೋಂಕಿತರಿದ್ದು, ಅವರಲ್ಲಿ ಏಳು ಮಂದಿಯನ್ನು ಶ್ರೀನಗರದಲ್ಲಿ ಮತ್ತು ಮೂವರನ್ನು ಜಮ್ಮುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.