Wednesday, August 10, 2022

Latest Posts

ಶ್ರೀನಗರ| ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಕಾಶ್ಮೀರದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಹೊಡೆದುರುಳಿಸುವ ಮೂಲಕ ಭದ್ರತಾ ಪಡೆಗಳು ಯಶಸ್ಸು ಸಾಧಿಸಿವೆ. ಶ್ರೀನಗರದ ನವಕಾದಲ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅವರಿಬ್ಬರನ್ನು ಕೊಲ್ಲಲಾಯಿತು.
ಸತ್ತವರಲ್ಲಿ ಒಬ್ಬಾತ ಜುನಾಯಿದ್ ಸೆಹ್ರಾಯಿ ಎಂದು ಗುರುತಿಸಲಾಗಿದೆ. ಈತ ಉಗ್ರವಾದಿ ಪ್ರತ್ಯೇಕತಾವಾದಿ ಮುಖಂಡ ಹಾಗೂ ತೆಹ್ರೀಕ್ ಇ ಹುರಿಯತ್ ಅಧ್ಯಕ್ಷ ಅಶ್ರಫ್ ಸೆಹ್ರಾಯಿ ಎಂಬಾತನ ಪುತ್ರ. ಈತ ಹಲವಾರು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.
ಸೋಮವಾರ ರಾತ್ರಿ ಉಗ್ರರ ಸುಳಿವು ಪಡೆದ ಭದ್ರತಾ ಪಡೆಗಳು ಅವರ ಅಡಗುದಾಣವನ್ನು ಸುತ್ತುವರಿದು ದಾಳಿ ನಡೆಸಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss