Friday, July 1, 2022

Latest Posts

ಶ್ರೀನಗರ| ಐವರು ಲಷ್ಕರ್ ಇ ತೋಯ್ಬಾ ಉಗ್ರರ ಬಂಧನ: ಶಸ್ತ್ರಾಸ್ತ್ರ ವಶಕ್ಕೆ ಪಡೆದ ಸೇನೆ

ಶ್ರೀನಗರ: ಜಮ್ಮು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಐವರು ಉಗ್ರರನ್ನು ಸೇನೆ ಬಂದಿಸಿದೆ.

ಉಗ್ರರ ಕುರಿತು ಮಾಹಿತಿ ಪಡೆದ ಭಾರತೀಯ ಸೇನೆ ಜಿಲ್ಲೆಯ ನರ್ಬಾಲ್ ಪ್ರದೇಶದಲ್ಲಿ ಅಡಗಿದ್ದ ಐವರು ಉಗ್ರರನ್ನು ಬಂಧಿಸಿದ ಸೇನೆ, ಅವರ ಬಳಿಯಿದ್ದ ಸಾಕಷ್ಟು ಶಸ್ತ್ರಾಸ್ತಗಳನ್ನು ಸೇನೆ ವಶಪಡಿಸಿಕೊಂಡಿದೆ. 28 ಲೈವ್ ರೌಂಡ್ಸ್ ಎಕೆ 47, 1 ಮ್ಯಾಗಜೀನ್ ಎಕೆ 47 ಮತ್ತು 20 ಎಲ್‌ಇಟಿ ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬುದ್ಗಾಮ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕ ಸಹಚರರನ್ನು ಇಮ್ರಾನ್ ರಶೀದ್, ಇಫ್ಶಾನ್ ಅಹ್ಮದ್ ಗನಿ, ಓವೈಸ್ ಅಹ್ಮದ್, ಮೊಹ್ಸಿನ್ ಖಾದಿರ್ ಮತ್ತು ಅಬಿದ್ ರಾಥರ್ ಎಂದು ಗುರುತಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss