Wednesday, August 10, 2022

Latest Posts

ಶ್ರೀಪಾದ ನಾಯ್ಕ ಆರೋಗ್ಯ ಸ್ಥಿರ: ಗೋವಾ ಸಿಎಂ ಪ್ರಮೋದ ಸಾವಂತ

ಹೊಸದಿಗಂತ ವರದಿ ಅಂಕೋಲಾ :

ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಕೇಂದ್ರ ಮಂತ್ರಿ ಶ್ರೀಪಾದ‌ ನಾಯ್ಕ‌ ಅವರ ದೇಹಸ್ಥಿತಿ ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಸ್ಥಿರವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ‌ ಗೋವಾ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಶ್ರೀಪಾದ ನಾಯ್ಕರ ಆರೋಗ್ಯ ಸ್ಥಿತಿ ವಿಚಾರಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಚಿವರಿಗೆ ತಜ್ಞ ವೈದ್ಯರ ತಂಡ ಯಶಸ್ವಿ ಶಸ್ರ್ತಚಿಕಿತ್ಸೆ ಮಾಡಿದೆ. ಈಗ ಅವರ ದೇಹಸ್ಥಿತಿ ತುಂಬ ಸ್ಥಿರವಾಗಿದೆ ಎಂದು ವೈದ್ಯರ ತಂಡದ ನೇತೃತ್ವ ವಹಿಸಿದ್ದ ಡಾ. ಶಿವಾನಂದ ಬಾಂದೇಕರ್ ತಿಳಿಸಿದ್ದಾರೆ. ಚಿಕಿತ್ಸೆಗೆ ಅವರು ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಅದಾಗ್ಯೂ ಇನ್ನೂ ತಜ್ಞ ವೈದ್ಯರ ಅಭಿಪ್ರಾಯ ಪಡೆಯುವ ಬಗ್ಗೆಯು ಚರ್ಚೆ ನಡೆದಿದೆ. ಸಂಜೆ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಚರ್ಚೆ ನಡೆಸಲಿದ್ದಾರೆ. ಅದರ ನಂತರ ಸಚಿವರಿಗೆ ಇನ್ನೂ ತಜ್ಞರ ಸೇವೆ ಒದಗಿಸುವ‌ ಅಥವಾ ಬೇರೆಡೆ ಸ್ಥಳಾಂತರಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss