Tuesday, June 28, 2022

Latest Posts

ಶ್ರೀಮಂತ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಹನಿಟ್ರ್ಯಾಪ್: 7 ಜನ ಆರೋಪಿಗಳು ಅರೆಸ್ಟ್

ಮಂಗಳೂರು: ಬೆಂಗಳೂರಿನಲ್ಲಿ ಶ್ರೀಮಂತ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ 7 ಜನರ ಗುಂಪೊಂದನ್ನು ಮಹದೇವ ಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಂಜಲಿ, ದೀಪಕ್, ಪ್ರೇಮನಾಥ್, ಟೈಸನ್, ವಿನೋದ್, ಪ್ರಕಾಶ್, ಈಶ್ವರಿ ಎಂದು ಗುರುತಿಸಲಾಗಿದೆ. ಈ ಏಳು ಜನರ ಗ್ಯಾಂಗ್ ಬೆಂಗಳೂರಿನ ಪೈ ಲೇಔಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು.

ಅಲ್ಲಿಗೆ ಶ್ರೀಮಂತ  ವ್ಯಕ್ತಿಗಳನ್ನು ಕರೆಸುತ್ತಿದ್ದರು. ಅಲ್ಲಿ ಯುವತಿಯ ಜೊತೆ ಶ್ರೀಮಂತ ವ್ಯಕ್ತಿಗಳಿರುವಾಗ ವಿಡಿಯೋ ಚಿತ್ರಿಸಿ, ಈ ವಿಷಯ ಬಾಯ್ ಬಿಟ್ಟರೆ  ವಿಡಿಯೋ ರಿಲೀಸ್ ಮಾಡುವುದಾಗಿ, ಜೀವ ಬೆದರಿಕೆ ಹಾಕಿ ಮಾರಕಾಸ್ತ್ರಗಳ ಮೂಲಕ ಹಲ್ಲೆ ನಡೆಸಿ ಚಿನ್ನಾಭರಣ, ಹಣ ಕಸಿದುಕೊಳ್ಳುತ್ತಿದ್ದರು.

ಈ ಬಗ್ಗೆ ಹನಿಟ್ರ್ಯಾಪ್ ಗೆ ಒಳಗಾದ ವ್ಯಕ್ತಿಯೊಬ್ಬ ಮಹದೇವಪುರ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ವಿರುದ್ಧ FIR ದಾಖಲಿಸಿ, ಬಂಧಿಸಲಾಗಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss