Friday, August 12, 2022

Latest Posts

ಶ್ರೀರಂಗಪಟ್ಟಣ| ಕಾಂಗ್ರೆಸ್‍ನಿಂದ ಹುಸಿ ಜಾತ್ಯಾತೀತತೆ ಪ್ರದರ್ಶನ: ಎ. ಮಂಜು

ಹೊಸ ದಿಗಂತ ವರದಿ,  ಶ್ರೀರಂಗಪಟ್ಟಣ:

ಕಾಂಗ್ರೆಸ್ ಪಕ್ಷ ಹುಸಿ ಜಾತ್ಯತೀತತೆ ಪ್ರದರ್ಶಿಸುತ್ತಿದೆ, ದೇಶದ ಸಾರ್ವಭೌಮತೆ ಬಗೆಗೆ ಆ ಪಕ್ಷ ಮತ್ತು ಮುಖಂಡರಿಗೆ ಗೌರವ ಇಲ್ಲ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ಎ. ಮಂಜು ಆರೋಪಿದರು.
ಪಟ್ಟಣದ ಹೊರ ವಲಯದಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಗುರುವಾರ ಏರ್ಪಡಿಸಿದ್ದ ಪ್ರಶಿಕ್ಷಣ ವರ್ಗ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದವರದ್ದ ಬರೀ ತೋರಿಕೆ ದೇಶಪ್ರೇಮ. ಪ್ರಧಾನಿ ನರೇಂದ್ರ ಮೋದಿ ಭಾರತದ ಸಂಸ್ಕೃತಿ, ಪರಂಪರೆಯನ್ನು ಪ್ರಪಂಚದಾದ್ಯಂತ ವಿಸ್ತರಿಸುತ್ತಿದ್ದಾರೆ. ಅವರಿಂದ ನಮ್ಮ ದೇಶದ ಹಿರಿಮೆ ಹೆಚ್ಚಾಗಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಸಮಾಜದ ಎಲ್ಲರ ಏಳಿಗೆಗಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್, ಉಪಾದ್ಯಕ್ಷ ಟಿ. ಶ್ರೀಧರ್, ಅಶೋಕಕುಮಾರ್, ಇಂದ್ರಕುಮಾರ್, ಎಸ್. ದೇವರಾಜು, ಎಸ್.ಕೆ. ಮಂಜುನಾಥ್, ಪೀಹಳ್ಳಿ ರಮೇಶ್, ಬಿ.ಸಿ. ಸಂತೋಷ್‍ಕುಮಾರ್, ವಿದ್ಯಾ ಉಮೇಶ್, ತಾ.ಪಂ. ಸದಸ್ಯೆ ವಿಜಯಲಕ್ಷ್ಮೀ, ಪುರಸಭೆ ಸದಸ್ಯೆ ಪೂರ್ಣಿಮಾ, ಹೊಸಹಳ್ಳಿ ಮಹದೇವು, ಹನಿಯಂಬಾಡಿ ನಾಗರಾಜು ಇತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss