Sunday, August 14, 2022

Latest Posts

ಶ್ರೀರಂಗಪಟ್ಟಣ| ಹೂವಿನ ತೋಟದಲ್ಲಿ ಗಾಂಜಾಗಿಡ ಬೆಳೆಸುತ್ತಿದ್ದ ಆರೋಪಿಯ ಬಂಧನ

ಶ್ರೀರಂಗಪಟ್ಟಣ : ಹೂವಿನ ತೋಟದಲ್ಲಿ ಗಾಂಜಾಗಿಡ ಬೆಳೆಸುತ್ತಿದ್ದ ಆರೋಪಿಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ನೇತೃತ್ವದಲ್ಲಿ ಅರಕೆರೆ ಠಾಣೆಯ ಪೊಲೀ ಸರು ದಾಳಿ ನಡೆಸಿ ಆರೋಪಿ ಯನ್ನ ಬಂಧಿಸಿದ್ದಾರೆ.
ತಾಲೂಕಿನ ಮಂಡ್ಯದ ಕೊಪ್ಪಲು ಗ್ರಾಮದ ಶಿವಣ್ಣ ಎಂಬುವರ ಪುತ್ರ ಸತೀಶ್ (42) ತಮ್ಮ ತೋಟದಲ್ಲಿ ಕಾಕಡ ಹೂವಿನ ಗಿಡಗಳೊoದಿಗೆ 220 ಗ್ರಾಂ ನಷ್ಟು ಗಾಂಜಾ ಸಸಿಗಳನ್ನು ಅಕ್ರಮ ವಾಗಿ ಬೆಳೆದಿದ್ದಾನೆ. ಖಚಿತ ಮಾಹಿತಿ ದೊರೆತ ಮೇರೆಗೆ ಡಿವೈಎಸ್ಪಿ ಅರುಣ್ ನಾಗೇ ಗೌಡ, ಸಿಪಿಐ ಯೋಗೇಶ್, ಪಿಎಸ್‍ಐ ಅರ್ಚನಾ ಹಾಗೂ ಅರಕೆರೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ತ್ಯಾಗರಾಜು ಇತರೆ ಸೇರಿದಂತೆ ಸಿಬ್ಬಂದಿ ಗಳು ಸೋಮವಾರ ಸಂಜೆ ದಾಳಿ ನಡೆಸಿ ಗಾಂಜಾ ಸಸಿಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ದ್ದಾರೆ. ಈ ಸಂಬಂಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss