Wednesday, August 10, 2022

Latest Posts

ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಭೂಮಿಪೂಜೆ: ಹೊಸಂಗಡಿಯಲ್ಲಿ ವಿಶೇಷ ಕಾರ್ಯಕ್ರಮ

ಕಾಸರಗೋಡು: ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃ ಶಕ್ತಿ , ದುರ್ಗಾವಾಹಿನಿ ಇವುಗಳ ಕಾಸರಗೋಡು ಜಿಲ್ಲಾ ಸಮಿತಿಗಳ ವತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಶಿಲಾನ್ಯಾಸದ ಪ್ರಯುಕ್ತ ಹೊಸಂಗಡಿಯ ಪ್ರೇರಣ ವಿಹಿಂಪ ಕಾರ್ಯಾಲಯದಲ್ಲಿ ಬುಧವಾರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಅದರಂತೆ ಬೆಳಗ್ಗೆ ರಕ್ಷಾಬಂಧನ ಉತ್ಸವದ ಬಳಿಕ ದೀಪ ಪ್ರಜ್ವಲನೆಯನ್ನು ಹಿರಿಯರಾದ ವಿಜಯ್ ಪಂಜ ಮಂಗಲ್ಪಾಡಿ ನೆರವೇರಿಸಿದರು. ಲೋಕೇಶ್ ಜೋಡುಕಲ್ಲು ಬೌದ್ಧಿಕ್ ನೀಡಿದರು. ಮೀರಾ ಆಳ್ವ ಬೇಕೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಶಂಕರ ಭಟ್ ಉಳುವಾನ ಸ್ವಾಗತಿಸಿ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಂದಿಸಿದರು. ದಿನಕರ ಬಿ.ಎಂ. ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ವಿಹಿಂಪ ಮತ್ತು ಸಹಸಂಘಟನೆಗಳ ಜಿಲ್ಲಾ ಹಾಗೂ ಪ್ರಖಂಡಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಓಂಕಾರ, ಐಕ್ಯಮಂತ್ರ , ಶ್ರೀರಾಮ ತಾರಕ ಮಂತ್ರ ಹಾಗೂ ಅಯೋಧ್ಯೆಗೆ ತೆರಳಿದ್ದ ಕರಸೇವಕರನ್ನು ಅಭಿನಂದಿಸುವ ಸಮಾರಂಭವನ್ನು ಆಯೋಜಿಸಲಾಯಿತು. ನಂತರ ಅಯೋಧ್ಯೆಯ ಶಿಲಾನ್ಯಾಸ ಕಾರ್ಯಕ್ರಮದ ನೇರಪ್ರಸಾರವನ್ನು ಬೃಹತ್ ಪರದೆಯಲ್ಲಿ ವೀಕ್ಷಿಸಲಾಯಿತು. ಶಾಂತಿ ಮಂತ್ರ ಮತ್ತು ಜಯಘೋಷದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss