Saturday, August 13, 2022

Latest Posts

ಶ್ರೀರಾಮಮಂದಿರ ನಿರ್ಮಾಣ ಹಿನ್ನಲೆ: ಹಿಂದುಗಳಿಗೆ ಗುಲಾಬಿ ಹೂವು ನೀಡಿ ಶುಭ ಕೋರಿದ ಅಲ್ಪಸಂಖ್ಯಾತರು

ಮೈಸೂರು: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಶಿಲಾನ್ಯಾಸದ ಪ್ರಯುಕ್ತ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ನಗರ ಮಂಡಲದ ಅಲ್ಪಸಂಖ್ಯಾತ ಮೋರ್ಚಾದಿಂದ ಶಾರದಾದೇವಿನಗರದ “ಶಾರದಾ ತ್ರಿಶಾಖಾ ವಿಪ್ರ ಬಳಗ”ದಲ್ಲಿ ಸೌಹಾರ್ದಯುತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಳಗದ ಕಛೇರಿಗೆ ತೆರಳಿದ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ನೆರೆದಿದ್ದ ಹಿಂದೂ ಬಾಂಧವರಿಗೆ ಗುಲಾಬಿ ಹೂವು ನೀಡಿ ಶುಭ ಕೋರಿದರು ಮತ್ತು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.

ಅಲ್ಪಸAಖ್ಯಾತ ಮೋರ್ಚಾದ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ಸ್ಟೀಫನ್ ಸುಜಿತ್ ಮಾತನಾಡಿ “ಭಾರತ ಜಗತ್ತಿಗೆ ವಸುದೈವ ಕುಟುಂಬಕA ಎಂಬ ಘೋಷ ವಾಕ್ಯ ಭೋಧಿಸಿದೆ. ದೇವನೊಬ್ಬ ನಾಮ ಹಲವು ಎಂದು ನಾವೆಲ್ಲರೂ ತಿಳಿದು ಸೌಹಾರ್ದಯುತವಾಗಿ ಬದುಕಬೇಕಿದೆ. ಹಿಂದೂ ಬಾಂಧವರ ಸಂಭ್ರಮದಲ್ಲಿ ಇಂದು ನಾವೂ ಭಾಗಿಯಾಗಿ ಸಂಭ್ರಮಿಸಿದ್ದೇವೆ, ಇದುವೇ ನಮ್ಮ ಭಾರತ” ಎಂದು ಸಂತಸ ವ್ಯಕ್ತಪಡಿಸಿದರು.

ಶಾರದಾ ತ್ರಿಶಾಖಾ ವಿಪ್ರ ಬಳಗದ ಅಧ್ಯಕ್ಷ ಶ್ರೀಧರ ಶರ್ಮಾರವರು ರಾಮ ಹಾಗೂ ಮಂದಿರದ ಮಹತ್ವದ ಕುರಿತು ಮಾತನಾಡಿ, ಸಿಹಿ ನೀಡಿದ ಅಲ್ಪಸಂಖ್ಯಾತರಿಗೆ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್ ಜಿ ರಾಜಾಮಣಿ, ಈರೇಗೌಡ, ಉಪಾಧ್ಯಕ್ಷ ರಾಕೇಶ್ ಭಟ್ಟ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸ್ಟೀಫನ್ ಸುಜಿತ್, ಮುಖಂಡರಾದ ಸಿಕಂದರ್, ಮುನಾವರ್ ಪಾಷ, ರೊಸಾಲಿನ ನೋಯೆಲ್, ರುಬಿನ್, ಕೇಬಲ್ ಮಹೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭಶ್ರೀ, ಪ್ರಧಾನ ಕಾರ್ಯದರ್ಶಿ ಗೀತ ಮಹೇಶ್, ಉಪಾಧ್ಯಕ್ಷೆ ರಶ್ಮಿ ಅನಿಲ್, ಮಹದೇವಮ್ಮ, ಯುವ ಮೋರ್ಚಾದ ಸಾಗರ್ ಸಿಂಗ್ ರಜಪೂತ್, ಅನುಪ್ ಮುತಾಲಿಕ್, ಸ್ಥಳೀಯ ಸತ್ಯನಾರಾಯಣ, ಕಾಮಾಕ್ಷಿ, ಕಟೇಶ್, ಸುದೀಪ್, ರಮೇಶ್ ರಾವ್, ಮುಂತಾದವರು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss