Sunday, June 26, 2022

Latest Posts

ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದಲ್ಲಿ ಸಂಸದ ಸಂಗಣ್ಣ ಕರಡಿ ಭಾಗಿ: ಕಾಂಗ್ರೆಸ್ ಮುಖಂಡರಿಂದ ನಿಧಿ ಸಮರ್ಪಣೆ

ಹೊಸ ದಿಗಂತ ವರದಿ, ಕೊಪ್ಪಳ:

ಜಿಲ್ಲೆಯಲ್ಲಿ ಎರಡನೇ ದಿನವಾದ ಸೋಮವಾರ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಮುಂದುವರೆದಿದ್ದು, ಸೋಮವಾರ ಹಿಟ್ನಾಳ ಬಂಡಿ ಹರ್ಲಾಪೂರ ಜಿಲ್ಲಾ ಪಂಚಾಯತಿ ಕ್ಷೇತ್ರದ ವ್ಯಪ್ತಿಯ ಗ್ರಾಮದಲ್ಲಿ ಸಂಸದ ಸಂಗಣ್ಣ ಕರಡಿ ಅಭಿಯಾನದಲ್ಲಿ ಭಾಗವಹಿಸಿ ನಿಧಿ ಸಮರ್ಪಣೆ ಮಾಡಿದರು.
ವಿಶೇಷವಾಗಿ ಹುಲಿಗಿ ಗ್ರಾಮದ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಟಿ, ಜನಾರ್ಧನ ಹುಲಿಗಿ ಅವರು ಒಂದು ಲಕ್ಷ ರೂಪಾಯಿಗಳನ್ನು ಹಾಗೂ ಈರಣ್ಣ ಈಳಗೇರ ಇಪ್ಪತ್ತೈದು ಸಾವಿರ, ಶ್ರೀನಿವಾಸ ರೆಡ್ಡಿ ಹೊಸಪೇಟೆ ಇಪ್ಪತ್ತೈದು ಸಾವಿರ, ರೂಪಾಯಿಗಳ ಚೆಕ್ ನ್ನು ಮಾನ್ಯ ಸಂಸದರಿಗೆ ಹಸ್ತಾಂತರಿಸಿದರು,
ಹಿಟ್ನಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹೊಸ ನಿಂಗಾಪುರ ಗ್ರಾಮದಲ್ಲಿ ವೀರನಗೌಡ ಪಾಟೀಲ್ ಇವರು 2.1 ಲಕ್ಷ ರೂ. ರೂಪಾಯಿಗಳ ಚೆಕ್ ನ್ನು ಸಂಸದರಿಗ ಹಸ್ತಾಂತರಿಸಿದರು. ಹಾಗೂ ಗ್ರಾಮದ ಅನೇಕರು ನಿಧಿ ಸಂಗ್ರಹದ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಅಭಿಯಾನದಲ್ಲಿ ತಾ,ಪಂ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ, ಸಹಕಾರ ಧುರಿಣರು ರಮೇಶ ವೈದ್ಯ, ತಾಲುಕು ಬಿಜೆಪಿ ಗ್ರಾಮೀಣ ಅಧ್ಯಕ್ಷ ಪ್ರದೀಪ ಹಿಟ್ನಾಳ, ಹುಲಿಗಿ ಗ್ರಾಮದ ಪರುಷರಾಮ ನಾಯಕ್, ಪರುಷರಾಮ ಅಕ್ಕಸಾಲಿ, ಅನೀಲ ದೇಸಾಯಿ, ತ್ರಯಂಬಕ ಕೊಂಡಿ, ಬಸವರಾಜ ಗದ್ದಿಕೇರಿ, ರಾಘವೇಂದ್ರ ರೆಡ್ಡಿ, ಅಗಳಕೇರಿ ಗ್ರಾಮದ ಪಂಚಾಯತ ಸದಸ್ಯ ವಿಶ್ವನಾಥ ಹೀರೆಮಠ, ಮಹೇಶ ಮಂಗಳೂರ, ಬಸವರಾಜ ಕರ್ಕಿಹಳ್ಳಿ, ವೀರಭದ್ರಯ್ಯ ಭೂಸನೂರಮಠ, ಶಹಪೂರ ಗ್ರಾಮದ ಪಂಪಯ್ಯ ಹೀರೆಮಠ, ಹೊಸಳ್ಳಿ ಗ್ರಾಮದ ಸತೀಶ್ ಪಾಟೀಲ ಶಿವಪೂರ ಗ್ರಾಮದ ಬಸವರಾಜ ಬಾರಕೇರ, ಮಂಜುನಾಥ ಪೂಜಾರ, ಶಿವಣ್ಣ ಮಹಮ್ಮದ ನಗರ, ಮತ್ತು ಅನೇಕ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss