spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಿತಿಯ ಜಿಲ್ಲಾ ಕಾರ್ಯಾಲಯ ಉದ್ಘಾಟನೆ

- Advertisement -Nitte

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಹನುಮ ಶಕ್ತಿಯ ಸಂಕಲ್ಪದೊಂದಿಗೆ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹ ಅಭಿಯಾನದಲ್ಲಿ ಕಾರ್ಯಕರ್ತರೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಕರೆ ನೀಡಿದರು.
ಅವರು ಬುಧವಾರ ನಗರದ ಮಧುವನ ಬಡಾವಣೆ ಸಾಯಿಮಂದಿರ ರಸ್ತೆಯ ಶ್ರೀನಿಧಿ ಸಮುಚ್ಛಯದಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಿತಿಯ ಜಿಲ್ಲಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ, ಸಂಸ್ಕತಿಗೆ, ದೇಶಕ್ಕೆ, ಜಗತ್ತಿಗೆ ನಿಷ್ಠಾವಂತ ಸ್ವಯಂಸೇವಕನೆಂದರೆ ಅದು ಹನುಮ, ಶ್ರೀರಾಮನ ಅವತಾರವಾಗಿ ಜಗತ್ತಿಗೆ ರಾಮನ ಆದರ್ಶವನ್ನು, ಭಾರತೀಯ ಸಂಸ್ಕತಿ ಸಾರವನ್ನು ಆತ ಜಗತ್ತಿಗೆ ಪಸರಿಸಿದ್ದಾನೆ. ಈ ದಿಶೆಯಲ್ಲಿ ಸಂಕಲ್ಪ ಶಕ್ತಿಯನ್ನು ಇಟ್ಟುಕೊಂಡು ರಾಮಮಂದಿರ ನಿಧಿ ಸಮರ್ಪನಾ ಅಭಿಯಾನ ಸಮಿತಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಅಭಿಯಾನದ ಮೂಲಕ ತೆರೆದ ಮನಸಿನಿಂದ ರಾಷ್ಟ್ರಕ್ಕೆ ಜೀವ, ಬುದ್ಧಿ ಸಮರ್ಪಣೆ ಆಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸ್ಪೂರ್ತಿ ತಂದುಕೊಳ್ಳೂವ ಜಾಗವಿದು. ನನ್ನ ಕಾಯಕ ದೇಶಕ್ಕೆನ್ನುವ ದೃಢತೆ ಮೂಡಬೇಕು. ನಿಧಿ ಸಂಗ್ರಹಕ್ಕೆ ಮನೆ ಮನೆಗಳಿಗೆ ತೆರಳಿದಾಗ ಇದೊಂದು ಸಂಸ್ಕಾರ ಎನ್ನುವ ಅರಿವನ್ನು ಅವರಲ್ಲಿ ಮೂಡಿಸಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಮೊಗ್ಗ ವಿಭಾಗದ ಕಾರ್ಯವಾಹ ಹಾಗೂ ಶ್ರೀರಾಮಮಂದಿರ ನಿರ್ಮಾಣ ನಿಧಿ ಸಂಗ್ರಹ ಅಭಿಯಾನದ ವಿಭಾಗ ಪ್ರಮುಖ್ ನರೇಂದ್ರ ಮಾತನಾಡಿ, ಅನೇಕ ಆಯಾಮಗಳ ಮೂಲಕ ನಿಧಿ ಸಂಗ್ರಹಕ್ಕೆ ತೆರಳಲಿದ್ದೇವೆ. ಅದಕ್ಕೆ ಆಶ್ರಯಕೊಡುವ ರೀತಿ ಈ ಕಾರ್ಯಾಲಯಕ್ಕೆ ಬಂದರೆ ಸಮಾಧಾನದ ಜೊತೆಗೆ ಸಾಮಾಗ್ರಿಗಳು, ಮಾರ್ಗದರ್ಶನ ಸಿಗಲಿದೆ ಎಂದರು.
ಕಾರ್ಯಾಲಯ ಫೆ.5 ರ ವರೆಗೆ ತೆರೆದಿರಲಿದೆ. ನಾವು ಹೆಗಲಿಗೇರಿಸಿಕೊಂಡಿರುವ ಸಂಕಲ್ಪದಂತೆ ಮನೆ ಮನೆಗೆ ತೆರಳಿ ನಿಧಿ ಸಂಗ್ರಹ ಕಾರ್ಯವನ್ನು ನಮಗಿರುವ ಸಮಯದಲ್ಲಿ ಮಾಡಿ ಮುಗಿಸಬೇಕು ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರು, ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಸಹ ಪ್ರಮುಖ್ ಶ್ರೀಕಾಂತ್ ಪೈ ಸೇರಿದಂತೆ ಇತರರು ಹಾಜರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss