Monday, August 8, 2022

Latest Posts

ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿಹಿಂಪ ಸೇವೆ ಅನನ್ಯ: ವಿಹಿಂಪ ಮುಖಂಡ ಡಾ.ಶಿವಣ್ಣ

ಕೋಲಾರ: ಭಾರತೀಯತೆಯ ಸಂಕೇತವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವ ಬಹಳ ಸಂತಸ ತಂದಿದೆ ಎಂದು ವಿಹಿಂಪ ಮುಖಂಡ ಡಾ.ಶಿವಣ್ಣ ತಿಳಿಸಿದ್ದಾರೆ.
ಇದು ಸಕಲ ಹಿಂದೂಗಳಿಗೆ ಪಾವನಕ್ಷೇತ್ರ ಮಾತ್ರವಲ್ಲ ಮಾನವೀಯತೆಯ ಮೇರು ಶಿಖರವೆನಿಸಿರುವ ಪ್ರಭು ಶ್ರೀರಾಮಚಂದ್ರರ ಜನ್ಮ ಸ್ಥಳವಾದ ಅಯೋಧ್ಯೆ ಇಡೀ ವಿಶ್ವದ ಜನತೆಗೂ ಮಹತ್ವವೆನಿಸಿರುವ ಮಂಗಳಮಯ ಭೂಮಿ.ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದು ಪರಿಷತ್ ಸೇವೆ ಅನನ್ಯ.
ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ತಾಂಡವವಾಡುತ್ತಿರುವ ಜಾತ್ಯಾತೀತತೆಯ ಹುಚ್ಚಿಗೆ ಬಲಿಯಾಗಿ ಶ್ರೀರಾಮನ ವ್ಯಕ್ತಿತ್ವವನ್ನು ಕುಚ್ಛಗೊಳಿಸಿ ಬರೀ ಕಾಲ್ಪನಿಕವೆತ್ತ ಅನ್ನುವ ರೀತಿಯಲ್ಲಿ ಪ್ರತಿಬಿಂಬಿಸುತ್ತಿದ್ದ ಮುಸ್ಲೀಂ ತುಷ್ಟೀಕರಣದ, ರಾಜಕಾರಣಕ್ಕೆ ಒಳಗಾಗಿ ಮಹಾಪುರಷನನ್ನು ಟೆಂಟ್‌ನಲ್ಲಿ ಪೂಜಿಸುವಂತಾಗಿತ್ತು ಎಂದು ವಿಷಾದಿಸಿದ್ದಾರೆ.
ಆದರೆ ಅವೆಲ್ಲದಕ್ಕೂ ಸುಪ್ರೀಕೋರ್ಟ್ ಮತ್ತು ಕೇಂದ್ರ ಸರ್ಕಾರ ತಿಲಾಂಜಲಿ ಹಾಡಿದ್ದು,ಇನ್ನು ಕೆಲವೇ ವರ್ಷಗಳಲ್ಲಿ ಭವ್ಯ ಶ್ರೀರಾಮ ಮಂದಿರ ತಲೆಯೆತ್ತಲಿದೆ.ಇದಕ್ಕೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಇಂದು ಭೂಮಿ ಪೂಜೆಯನ್ನು ನೆರೆವೇರಿಸುತ್ತಿದ್ದು,ಎಲ್ಲಾ ಹಿಂದುಗಳ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದಿದ್ದಾರೆ.
ಇಂದು ದೇಶದ ಹೆಮ್ಮೆಯ ಪ್ರಧಾನಿಗಳು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು,ಆದಷ್ಟು ಬೇಗ ಭವ್ಯರಾಮ ಮಂದಿರ ಹಿಂದುಗಳ ಪುಣ್ಯಕ್ಷೇತ್ರವಾಗಲಿದೆ.
ಭವ್ಯ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯಾದಂತ ಎಲ್ಲಾ ಆತಂಕಗಳನ್ನು  ಆಂದೋಲನಗಳ ಮುಖಾಂತರ ಕಾಲಘಟ್ಟದಲ್ಲಿ ಬಂದಂತಹ ಎಲ್ಲಾ ಸರ್ಕಾರಗಳಿಗೂ ಹಾಗೂ ನಾಯಕರಿಗೂ ಹೋರಾಟದ ಮೂಲಕ ಕಾರ್ಯಗತ ಮಾಡಿದಂತಹ ಏಕೈಕ ಸಂಘಟನೆಯೆಂದರೆ ಅದು ವಿಶ್ವ ಹಿಂದು ಪರಿಷತ್ ಮಾತ್ರ.
ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ  ಸ್ವಯಂಸೇವಕ ಸಂಘದ ಒಂದು ಆಯಮವಾಗಿದ್ದು,ಅಂದಿನಿಂದ ಇಂದಿನವರೆಗೂ ಜಾತಿ ಭಾಷೆ,ಪ್ರಾಂತ್ಯ  ಪಕ್ಷಬೇಧಗಳನ್ನು ತೊಡೆದುಹಾಕುತ್ತಾ ಸಮಸ್ತ ಹಿಂದೂ ಸಮಾಜವನ್ನು ಸಂಘಟಿಸಿ ಹಿಂದೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿರಿಮೆ-ಗರಿಮೆಗಳನ್ನು ರಕ್ಷಣೆ ಮಾಡುತ್ತಾ ಹಿಂದೂ ಸಮಾಜದ ಸವಾಲುಗಳನ್ನು ದಿಟ್ಟತನದಿಂದ ಸದಾ ಕಾರ್ಯೋನ್ಮುಕರಾಗಿ ಕಾರ್ಯನಿರ್ವಹಿಸುತ್ತಿದೆ.
ವಿಶ್ವ ಹಿಂದು ಪರಿಷತ್ ,ಭಜರಂಗದಳ,ದುರ್ಗಾವಾಹಿನಿ,ಮಾತೃಮಂಡಳಿ ಸೇರಿದಂತೆ ಅನೇಕ ಸಂಘಸಂಸ್ಥೆಗಳು ರಾಮಜನ್ಮಭೂಮಿಗಾಗಿ ಕಾರ್ಯನಿರ್ವಹಿಸಿರುವುದನ್ನು ಸ್ಮರಿಸಬಹುದಾಗಿದೆ.
ಶ್ರೀರಾಮ ಜನ್ಮಸ್ಥಾನದಲ್ಲಿ ಮಂದಿರ ನಿರ್ಮಾಣಕ್ಕಾಗಿ ವಿಶ್ವಹಿಂದೂ ಪರಿಷದ್ ಅನೇಕ ಆಂದೋಲನಗಳನ್ನು ನಡೆಸುತ್ತಾ ಬಂದಿದೆ.೧೯೮೩ ರ ಮುಜಾಫರ್ ನಗರದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಅಯೋಧ್ಯಾ-ಕಾಶೀ-ಮಥುರಾ ವಿಮುಕ್ತಿಯ ಸಂಕಲ್ಪಕ್ಕೆ ಒಕ್ಕೊರಲಿನ ಬೆಂಬಲ ನೀಡುವ ಮೂಲಕ ಪ್ರಾರಂಭವಾದ ಹೋರಾಟ ೧೯೮೪ ರಲ್ಲಿ ದೆಹಲಿಯ ವಿಜ್ಞಾನಭವನದಲ್ಲಿ ಮೊದಲ ಧರ್ಮಸಂಸತ್ ನಡೆಸಲಾಯಿತು.
ಅಯೋಧ್ಯೆಯ ಮುಕ್ತಿಗಾಗಿ ಸಂಕಲ್ಪ,ಸರಯೂ ನದೀ ತೀರದಲ್ಲಿ ಸಾಧುಸಂತರ ಸಂಕಲ್ಪ,೧೯೮೫ರ ವಿಜಯದಶಮಿಯಂದು  ರಾಮಜಾನಕಿ ರಥಗಳ ಮೂಲಕ ಜನಜಾಗೃತಿ,೧೯೮೯ರಲ್ಲಿ  ಮಂದಿರ ಶಿಲಾನ್ಯಾಸ ಪುಷ್ಪಾಂಜಲಿ,೧೯೯೦ರಲ್ಲಿ ಶ್ರೀರಾಮ ಜ್ಯೋತಿಯಾತ್ರೆ,ದೇವೋತ್ಥಾನ ಏಕಾದಶಿಯಂದು ಪ್ರಥಮ ಕಾರಸೇವೆ.
೧೯೯೧ರಲ್ಲಿ ದೆಹಲಿಯ ಬೋಟ್ ಕ್ಲಭ್‌ನಲ್ಲಿ ೩೦ಲಕ್ಷ ರಾಮಭಕ್ತರ ಬೃಹತ್ ರ‍್ಯಾಲಿ,೧೯೯೨ರಲ್ಲಿ,ಶಾಶ್ತ ಕಾಗದ ಪತ್ರ,ನಂದಿ ಗ್ರಾಮದಿಂದ ಶ್ರೀರಾಮ ಪೂಜನಾ ಕಾರ್ಯಕ್ರಮ,ಎರಡನೇ ಕಾರಸೇವೆ,ಕಳಂಕಿತ ಕಟ್ಟಡದ ನೆಲಸಮ,೨೦೧೭ರಲ್ಲಿ ಉಡುಪಿಯ ಧಮ್ಸಂಸತ್ ನಲ್ಲಿ ಸಾಧುಸಂತರ ನಿರ್ಣಯ ಹಾಗೂ ಒಂದು ವರ್ಷದೊಳಗೆ ಅಯೋದ್ಯೆಯಲ್ಲಿ ರಾಮಮಮದಿರ ಎಂಬಿತ್ಯಾದಿ ಆಂದೋಲನಗಳನ್ನು ನಡೆಸಿಕೋಮಡು ಬಂದಿದೆ.
ಒಟ್ಟಾರೆಯಾಗಿ ಹಲವಾರು ವರ್ಷಗಳ ನಂತರ ರಾಮಜನ್ಮಭೂಮಿ ವಿವಾದ ಬಗೆಹರಿದು ಹಿಂದುಗಳ ಆರಾಧ್ಯ ದೈವ ಶ್ರೀರಾಮ ಚಂದ್ರಪ್ರಭುಗಳ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯುತ್ತಿದ್ದು,ಶೀಘ್ರದಲ್ಲೇ ಯಾವುದೇ ವಿವಾದಗಳು ಬಾರದೆ ಲೋಕಾರ್ಪಣೆಗೊಂಡು ಭಕ್ತರ ಮನ ತಣಿಯುವಂತಾಗಲಿ ಎಂದು ಆಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss