Tuesday, August 16, 2022

Latest Posts

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ: ಕೆ.ಆರ್.ಪೇಟೆಯ ಭೂವರಹನಾಥಸ್ವಾಮಿಗೆ ವಿಶೇಷ ಪೂಜೆ

ಕೆ.ಆರ್.ಪೇಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಶಿಲಾನ್ಯಾಸ ಮಾಡಿದ ಹಿನ್ನಲೆ ತಾಲೂಕಿನ ಪುರಾಣ ಪ್ರಸಿದ್ದ ಭೂವರಹನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ಭೂ ವರಹನಾಥನಿಗೆ ಹಲವು ಬಗೆಯ ಪುಷ್ಪಾಲಂಕಾರ ಮಾಡಲಾಗಿತ್ತು. ಪರಕಾಲ ಮಠದ ವಾಘೇಶ್ ಬ್ರಹ್ಮ ತಂತ್ರಶ್ರೀ ಮತ್ತು ಶ್ರೀನಿವಾಸ ರಾಘವನ್ ನೇತೃತ್ತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿಲಾಯಿತು.
ಶ್ರೀನಿವಾಸ ರಾಘವನ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಿವಿಘ್ರ್ನವಾಗಿ ಬಹುಬೇಗ ನೆರವೇರಲಿ. ವಿಶ್ವದ ಹಿಂದೂಗಳ ಶತಮಾನದ ಕನಸು ನೆನಸಾಗುತ್ತಿದೆ. ನಾಗರ ಶೈಲಿಯಲ್ಲಿ 3 ಮಹಡಿಯ ಸ್ವರೂಪದಲ್ಲಿ ನಿರ್ಮಾಣವಾಗುತ್ತಿದೆ. ಈ ರಾಮಮಂದಿರ ಜಗತ್ತಿನಲ್ಲಿ ಹೊಸ ಧರ್ಮಕೇಂದ್ರವಾಗಿ, ಧಾರ್ಮಿಕ ಪ್ರವಾಸಿ ತಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss