Friday, July 1, 2022

Latest Posts

ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನ: ಉದಾರ ದೇಣಿಗೆ ನೀಡಲು ಸಿ.ವಿ.ಚಂದ್ರಶೇಖರ ಮನವಿ

ಹೊಸದಿಗಂತ ವರದಿ, ಕೊಪ್ಪಳ

ಕೊಪ್ಪಳ ಜಿಲ್ಲೆಯಾದ್ಯಂತ ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಸಮತಿಯಿಂದ ಭಾನುವಾರ ಹಮ್ಮಿಕೊಂಡ ನಿಧಿ ಸಮರ್ಪಣಾಭಿಯಾನಕ್ಕೆ ಎಲ್ಲರೂ ಜಾತಿ-ಮತ-ಪಂಥ ಮರೆತು ಉದಾರ ದೇಣಿಗೆ ನೀಡಿ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಮನವಿ ಮಾಡಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ನಿಧಿ ಸರ್ಪಣಾಭಿಯಾನ ನಡೆಸಿದರು. ನಂತರ ಮಾತನಾಡಿ, ಶ್ರೀರಾಮ ಭಾರತೀಯ ಸಂಸ್ಕೃತಿ, ಜಗತ್ತಿನ ಆದರ್ಶ ಪುರುಷ, ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣವಾಗಲಿದೆ.

ಜಗತ್ತಿನ ಇತಿಹಾಸದಲ್ಲಿ ಅಯೋಧ್ಯೆಯಲ್ಲಿ ಹೊಸ ಅಧ್ಯಾಯ ಸೃಷ್ಠಿಯಾಗುತ್ತಿದೆ. ಇದಕ್ಕೆ ಸರ್ವ ಸಮಾಜದ ಬಾಂಧವರು ಜಾತಿ-ಧರ್ಮ, ಮತ-ಪಂಥ ತೊರೆದು ಸರ್ವರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಅಭಿಯಾನದಲ್ಲಿ ಸಹಸ್ರಾರು ಸಂಖ್ಯೆಯ ಶ್ರೀರಾಮ ಭಕ್ತರು ಪಾಲ್ಗೊಂಡದ್ದು, ನಗರದ  ಪ್ರತಿಯೋಂದು ವಾರ್ಡ್ ಗಳ ಮನೆಗಳಿಗೆ ತೆರಳಿ ನಿಧಿ ಸಂಗ್ರಹಿಸಲಾಯಿತು. ಭವ್ಯ ಶ್ರೀರಾಮನ ಭಾವಚಿತ್ರದ ಆರಂಭಗೊoಡ ಶೋಭಾಯಾತ್ರೆಯಲ್ಲಿ ಶ್ರೀರಾಮ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಸುರಿಸಲಾಯಿತು.

ನಗರದ ರಾಘವೇಂದ್ರ ಮಠದಿಂದ ಆರಂಭಗೊoಡ ಶೋಭಾಯಾತ್ರೆ ಸದಾಶಿವ ನಗರ, ಗಾಂದಿ ನಗರ, ಬಸವ ನಗರ, ಬಿಟಿ ಪಾಟೀಲ್ ನಗರ, ಗವಿಶ್ರೀ ನಗರ, ಭಾಗ್ಯ ನಗರ,  ಸೇರಿದಂತೆ ನಗರದ 31 ವಾರ್ಡ್ ಗಳಲ್ಲಿ ಸಂಚರಿಸಿ, ನಿಧಿ ಸಮರ್ಪಣಾ ಅಭಿಯಾನ ನಡೆಸಿದರು.

ಈ ಸಂಧರ್ಬದಲ್ಲಿ  ಮುಖಂಡರಾದ ಅಪ್ಪಣ್ಣ ಪದಕಿ, ದೇವರಾಜ ಹಾಲಸಮುದ್ರ ಸೇರಿದಂತೆ ವಿವಿಧ ಸಂಘಟನೆಗಳು ಎಬಿವಿಪಿ ಕಾರ್ಯಕರ್ತರು ಮತ್ತು ಶ್ರೀರಾಮನ ಭಕ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss