ಹೊಸ ದಿಗಂತ ವರದಿ ಶಿವಮೊಗ್ಗ:
ಶ್ರೀರಾಮ ಮಂದಿರ ರಾಷ್ಟ್ರ ಮಂದಿರವಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗುರುವಾರ ಹಮ್ಮಿಕೊಂಡಿದ್ದ ಶ್ರೀರಾಮ ಮಂದಿರ ನಿಧಿ ಸಂಗ್ರಹದಲ್ಲಿ ಪಾಲ್ಗೊಂಡ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು.
ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತವಾಗಿದ್ದ ಮಸೀದಿಯನ್ನು ತೆರವುಗೊಳಿಸಲಾಗಿದೆ. ಅಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಈಗಾಗಲೇ ಶಂಕುಸ್ಥಾಪನೆ ಮಾಡಿದ್ದಾರೆ. ನ್ಯಾಯಾಲಯ ಕೂಡ ಮಂದಿರದ ಪರವಾಗಿ ತೀರ್ಪು ನೀಡಿದೆ ಎಂದರು.
ಇದು ಜನರಿಂದ ನಿರ್ಮಾಣ ವಾಗಬೇಕೆಂಬ ಉದ್ದೇಶದಿಂದ ನಿಧಿ ಸಂಗ್ರಹ ಮಾಡಲಾಗುತ್ತಿದೆ. ಪ್ರತೀ ಮನೆಯಿಂದಲೂ 10 ರೂ. ವನ್ನಾದರೂ ಸಂಗ್ರಹ ಮಾಡಿ ಶ್ರಿರಾಮಂದಿರಕ್ಕೆ ಸಮರ್ಪಿಸಲಾಗುತ್ತದೆ. ಮುಂದೆ ಇದು ರಾಷ್ಟ್ರ ಮಂದಿರವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.