Tuesday, August 16, 2022

Latest Posts

ಶ್ರೀಲಂಕಾ ದ್ವೀಪ ರಾಷ್ಟ್ರದ ನೂತನ ಪ್ರಧಾನಮಂತ್ರಿಯಾಗಿ ಮಹಿಂದಾ ರಾಜಪಕ್ಸೆ ಪ್ರಮಾಣ ವಚನ ಸ್ವೀಕಾರ

ಕೊಲೊಂಬೊ: ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಇಂದು ದ್ವೀಪ ರಾಷ್ಟ್ರದ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಧಾನಿ ಕೊಲೊಂಬೊದ ಬೌದ್ಧ ದೇವಾಲಯದಲ್ಲಿ ಇಂದು ಬೆಳಗ್ಗೆ ನಡೆದ ಸಮಾರಂಭದಲ್ಲಿ ಮಹಿಂದಾ ಅವರ ಕಿರಿಯ ಸಹೋದರ ಮತ್ತು ಶ್ರೀಲಂಕಾ ಅಧ್ಯಕ್ಷ ಗೊಟಬಾಯಾ ರಾಜಪಕ್ಸೆ ಪ್ರಮಾಣ ವಚನ ಬೋಧಿಸಿದರು.
ಶ್ರೀಲಂಕಾ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಮತ್ತು ಅವರ ಸಹೋದರ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸೆ ನೇತೃತ್ವದ ಆಡಳಿತಾರೂಢ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್‍ಎಲ್‍ಪಿಪಿ) ಒಂಭತ್ತನೇ ಸಂಸದೀಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿತ್ತು.
ಪ್ರಬಲ ರಾಜಪಕ್ಸೆ ಕುಟುಂಬದ ರಾಜಕೀಯ ಪಕ್ಷವು ಸಂಸದೀಯ ಚುನಾವಣೆಗಳಲ್ಲಿ ಎರಡನೇ ಮೂರು ಭಾಗದಷ್ಟು ಸ್ಪಷ್ಟ ಬಹುಮತದೊಂದಿಗೆ ಐತಿಹಾಸಿಕ ಜಯ ಜಯ ದಾಖಲಿಸಿದೆ. 225 ಸದಸ್ಯ ಬಲದ ಸಂಸತ್ತಿನಲ್ಲಿ ರಾಜಪಕ್ಸೆ ಸಹೋದರರ ನೇತೃತ್ವದ ಪಕ್ಷವು 145 ಸ್ಥಾನಗಳನ್ನು ಗಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss