ಚಿತ್ರದುರ್ಗ: ಅಯೋಧ್ಯೆಯ ವಿಶ್ವವಿಖ್ಯಾತ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಶ್ರೀರಾಮ ತೀರ್ಥಕ್ಷೇತ್ರ ಸಮಿತಿಯ ಮುಖ್ಯಸ್ಥರಾದ ಚಂಪತ್ ರಾಯ್ ಅವರನ್ನು ಭೇಟಿಯಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ರಾಮಮಂದಿರ ನಿರ್ಮಾಣಕ್ಕೆ ೧೦೧೦೧ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು.