Monday, August 8, 2022

Latest Posts

ಶ್ರೀ ರಮಣ ಮಹರ್ಷಿ ಅಂಧರ ಪರಿಷತ್ ವತಿಯಿಂದ ವಿಕಲಚೇತನ ಕುಟುಂಬಗಳಿಗೆ ಆಹಾರಕಿಟ್ ವಿತರಣೆ

ರಾಮನಗರ: ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದೆ ಕಳೆದ ನಾಲ್ಕು ತಿಂಗಳುಗಳಿಂದಲೂ ಸಂಕಷ್ಟದಲ್ಲಿದ್ದ ಬದುಕು ನಡೆಸುತ್ತಿರುವ ವಿಕಲಚೇತನ ಕುಟುಂಬಗಳಿಗೆ ನೀಡುವ ಆಹಾರ ಕಿಟ್ ವಿತರಣೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶ್ರೀರಮಣ ಮಹರ್ಷಿ ಅಂಧರ ಪರಿಷತ್ತು ಸಮುದಾಯ ಸಂಯೋಜಕ ಸಿದ್ದೇಗೌಡ ತಿಳಿಸಿದರು.
ಅವರು ತಾಲ್ಲೂಕಿನ ಸುಣಘಟ್ಟ ಗ್ರಾಮದಲ್ಲಿನ ಶ್ರೀ ರಮಣ ಮಹರ್ಷಿ ಅಂಧರ ಪರಿಷತ್ತು ಶಾಖಾ ಕಛೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ರಮಣ ಮಹರ್ಷಿ ಅಂಧರ ಪರಿಷತ್ತಿನ ಆಶ್ರಯದ ವಿಕಲಚೇತನ ಕುಟುಂಬಗಳಿಗೆ ಆಹಾರಕಿಟ್ ವಿತರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಧರು ವಿಕಲರು ಹಾಗೂ ಸಮಾಜದಲ್ಲಿ ಶೋಷಣೆಗೊಳಗಾದವರ ಸ್ಪಂದನೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಶ್ರೀ ರಮಣ ಮಹರ್ಷಿ ಅಂಧರ ಪರಿಷತ್ತು ವಿಕಲಚೇತನ ಕುಟುಂಬಗಳಿಗೆ ಕೊರೋನಾ ಪೀಡಿತ ಪ್ರಾರಂಭದ ದಿನದಿಂದಲೂ ಆಹಾರ ಕಿಟ್‌ಗಳನ್ನು ವಿತರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಭಿಮಾನಿ ವಿಕಲಚೇತನರ ತಾಲ್ಲೂಕು ಶಾಖೆಯ ಅಧ್ಯಕ್ಷ ಶಿವಬೀರಯ್ಯ,ಶ್ರೀ ರಮಣ ಮಹರ್ಷಿ ಅಂಧರ ಪರಿಸತ್ತು ನೀಡುತ್ತಿರುವ ಆಹಾರ ಪದಾರ್ಥಗಳ ಕಿಟ್ ಸಮರ್ಪಕವಾಗಿ ಬಳಸಿಕೊಳ್ಳಬೇಕು.ಇಂತಹ ಸಂದಿಗ್ಧ ಸಂದರ್ಭದಲ್ಲಿ ವಿಕಲಚೇತನರ ಕಷ್ಟಕ್ಕೆ ಸ್ಪಂದನೆ ಮಾಡುತ್ತಿರುವುದು ಸಂತಷದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾದ ನಾಗಮಣಿ, ವನಜಾಕ್ಷಿ, ಹೊಯ್ಸಳ ಪುಟ್ಟಮಾದು ಹಾಗೂ ಹಲವಾರು ಮಂದಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss