Saturday, August 13, 2022

Latest Posts

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಹರಿಹರಪುರ ಮಠದಿಂದ ದೇಣಿಗೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಶ್ರೀ ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಹರಿಹರಪುರ ಶ್ರೀ ಮಠದವೂ ಕೈಜೋಡಿಸಿದ್ದು, 1,11,111 ರೂ. ದೇಣಿಗೆಯನ್ನು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ಗೆ ಸಮರ್ಪಣೆ ಮಾಡಿದೆ.
ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮೀ ನೃಸಿಂಹ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ಆಶೀರ್ವಾದ ನೀಡಿ ಶ್ರೀಮಠದ ವತಿಯಿಂದ ಈ ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತ ಅಧಿಕಾರಿ ಡಾ. ಬಿ. ಎಸ್.ರವಿಶಂಕರ್, ಕಾಫಿ ಬೋರ್ಡ್‍ನ ರಾಷ್ಟೀಯ ಉಪಾಧ್ಯಕ್ಷ ಜಿ.ಎಸ್ ಮಹಾಬಲ ರಾವ್, ಬಿಜೆಪಿ ಶಿವಮೊಗ್ಗ ಸಂಘಾಟನಾ ಕಾರ್ಯದರ್ಶಿ ಬಿ.ಕೆ ಗಣೇಶ್ ರಾವ್, ಜಿ.ಪಂ ಸದಸ್ಯ ಎಸ್.ಎನ್ ರಾಮಸ್ವಾಮಿ, ಪ್ರಭೋಧಿನಿ ಗುರುಕುಲದ ಕಾರ್ಯದರ್ಶಿ  ಉಮೇಶ್ ರಾವ್ ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss