Wednesday, July 6, 2022

Latest Posts

ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ ನಿಂದ ಶ್ರೀ ರಾಮಮಂದಿರ ನಿರ್ಮಾಣಕ್ಕೆ 1,11,111 ರೂ.ಸಮರ್ಪಣೆ

ಹೊಸ ದಿಗಂತ ವರದಿ, ಕಲಬುರಗಿ:

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಇಲ್ಲಿನ ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್‌ 1,11,111 ದೇಣಿಗೆ ನೀಡಿದೆ.
ಟ್ರಸ್ಟ್ ಕಾರ್ಯದರ್ಶಿ ವಿ.ಜಿ.ಗಚ್ಚಿನಮನಿ ಅವರು ಚೆಕ್ಕನ್ನು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರಿಗೆ ಹಸ್ತಾಂತರಿಸಿದರು.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದು ಪರಿಷತ್‌ಗಳು ನಿಧಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಟ್ರಸ್ಟ್ ಪದಾಧಿಕಾರಿಗಳಿಗೆ ಮನವಿ ಮಾಡಿಕೊಂಡಾಗ, ದೇಣಿಗೆಯ ಚೆಕ್ ನೀಡಿದರು.
ಇದೇ ಸಂದರ್ಭದಲ್ಲಿ ಬಿ.ಜಿ. ಪಾಟೀಲ, ವಿಶ್ವ ಹಿಂದು ಪರಿಷತ್ ಜಿಲ್ಲಾ ಗೌರವ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ, ಮಾಣಿಕರಾವ್ ಗಚ್ಚಿನಮನಿ, ರಾಮಚಂದ್ರ ರೆಡ್ಡಿ, ಡಾ.ಬಸವರಾಜ ಬೆಂಡಿ, ಸುಭಾಷ ಕಮಲಾಪುರ, ರಮೇಶ ಜಿ. ಆಪನೂರ, ಕೃಷ್ಣ ಜೋಶಿ, ಡಾ.ಶಿವಶರಣ ಗೊಡಾಳ, ರಮೇಶ ಪಾಟೀಲ, ಡಾ. ಪ್ರಶಾಂತ ಕಮಲಾಪುರಕರ, ಸೂರಜ್‌ ಪ್ರಸಾದ್ ತಿವಾರಿ, ಟ್ರಸ್ಟ್ ಪ್ರಧಾನ ವ್ಯವಸ್ಥಾಪಕ ಸುರೇಶ ನಿಂಬರ್ಗಿ, ರಾಜು ಕುಲಕರ್ಣಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss