ಹೊಸ ದಿಗಂತ ವರದಿ, ಶಿವಮೊಗ್ಗ:
ಸಾಗರ ತಾಲೂಕಿನ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸಂಕ್ರಾಂತಿ ವಿಶೇಷ ಪೂಜೆ ಜನವರಿ 14 ವತ್ತು 15ರಂದು ನಡೆಯಲಿದೆ.
ಜ.14ರಂದು ದೇವಿಯ ಮೂಲಸ್ಥಾನವಾದ ಸೀಗೆಕಣಿವೆಯಲ್ಲಿ ಪ್ರಥಮಪೂಜೆ ಸಲ್ಲಿಸಿ, ಅಲ್ಲಿಂದ ಜ್ಯೋತಿಯ ಮೆರವಣಿಗೆ ಹೊರಡಲಿದೆ.
ನಂತರ ಸಿಗಂದೂರು ದೇವಸ್ಥಾನದ ಚೌಡಮ್ಮ ದೇವಿಯ ಸನ್ನಿಧಾನದಲ್ಲಿ ಜ್ಯೋತಿ ಪ್ರತಿಷ್ಟಾಪನೆ ಮಾಡಲಾಗುತ್ತದೆ. ನಂತರ ವಿಶೇಷ ಪೂಜೆ, ಹೂವು ಹಾಗೂ ಆಭರಣ ಅಲಂಕಾರ ನಡೆಯಲಿದೆ.
ಜ. 15ರಂದು ಬೆಳಗ್ಗೆ 4ಗಂಟೆಗೆ ಪಂಚಾಮೃತ ಅಭಿಷೇಕ ಪೂಜೆ, ಮಹಾಭಿಷೇಕ, ಚಂಡಿಕಾ ಹೋಮ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 4ರಿಂದ ಮಧ್ಯಾಹ್ನ 1-45ರವರೆಗೆ ಪೂಜೆ ಇರುತ್ತದೆ. ಮಧ್ಯಾಹ್ನ 4 ರಿಂದ ಸಂಜೆ 6ರವರೆಗೆ ದೇವಿಯ ದರ್ಶನ ವ್ಯವಸ್ಥೆ ಮಾತ್ರ ಇರುತ್ತದೆ.
ನಿತ್ಯ ಪ್ರಸಾದ ಭೋಜನ ವ್ಯವಸ್ಥೆಯು ಮಧ್ಯಾಹ್ನ 12ರಿಂದ 2-30 ಹಾಗೂ ರಾತ್ರಿ 7-30ರಿಂದ 9ರವರೆಗೆ ಇರುತ್ತದೆ.