ಇಸ್ತಾನ್ಬುಲ್ : ಶ್ವಾಸಕೋಶ ಕ್ಯಾನ್ಸರ್ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಟರ್ಕಿಯ ಮಾಜಿ ಪ್ರಧಾನಿ ಮೆಸುತ್ ಯಿಲ್ಮಾಜ್ (72) ನಿಧನರಾಗಿದ್ದಾರೆ.
1991ರಿಂದ 2002 ತನಕ ಟರ್ಕಿಯ ಮದರ್ಲ್ಯಾಂಡ್ ಪಕ್ಷ ಮುನ್ನಡೆಸಿದ್ದ ಮೆಸುತ್, ಮೂರು ಭಾರಿ ಪ್ರಧಾನಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅವರು ಎರಡು ಬಾರಿ ಪ್ರಧಾನಿಯಾಗಿದ್ದಾಗ, ಸಮಿಶ್ರ ಸರ್ಕಾರಗಳು ಪತನಗೊಂಡ ಬಳಿಕ ಕೆಲವು ತಿಂಗಳು ಮಾತ್ರ ಆಳ್ವಿಕೆ ನಡೆಸಿದ್ದರು.
2019ರಲ್ಲಿ ಶ್ವಾಸಕೋಶ ಕ್ಯಾನ್ಸರ್ಗೆ ತುತ್ತಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಬಳಿಕ ಇದೇ ವರ್ಷದ ಮೇ ತಿಂಗಳಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಇಸ್ತಾನ್ಬುಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.