ಬೆಂಗಳೂರು: ಈ ಬಾರಿ ಗಣೇಶನ ಹಬ್ಬ ಸರಕಾರದ ಶರತ್ತಿನಂತೆ ಆಚರಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಭಾರತೀಯ ಇತಿಹಾಸ ಹಾಗೂ ಸಾಂಸ್ಕೃತಿಕ ಆಚರಣೆಯಾಗಿರುವ ಗಣೇಶೋತ್ಸವವನ್ನು ರದ್ದುಗೊಳಿಸಬಾರದೆಂದು ಈಗಾಗಲೇ ಸಾಕಷ್ಟು ಸಂಘ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕೊರೋನಾ ಸೋಂಕಿನ ನಡುವೆ ಗೌರಿ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಮನವಿ ಸಲ್ಲಿಸುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳಂತೆ ಗೌರಿ ಗಣೇಶ ಹಬ್ಬ ಆಚರಿಸುವ ಸ್ಥಳವನ್ನು ಪರಿಶೀಲಿಸಿ, ಸೂಕ್ತ ಕ್ರಮಗಳನ್ನೊಳಗೊಂಡ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ರಾಜ್ಯದಲ್ಲಿ ಈಗಾಗಲೇ ಮದ್ಯಪಾನ ಅಂಗಡಿಗಳು, ದೊಡ್ಡ ಅಂಗಡಿ ಮುಂಗಟ್ಟುಗಳು, ಹಾಗೂ ಮಾರುಕಟ್ಟೆಗಳನ್ನು ನಿಯಮಗಳೊಂದಿಗೆ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆ. ಸಾರ್ವಜನಿಕ ಆಚರಣೆಯನ್ನು ರದ್ದುಗೊಳಿಸಿದರೆ ಬೇಸರವಾಗುವುದು. ಸಾರ್ವಜನಿಕ ಆಚರಣೆಗಳ ವೇಳೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬೇಕಾದ ನಿಯಮಗಳನ್ನು ಪಾಲಿಸಲಾಗುವುದು ಸಂಘ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.