Friday, July 1, 2022

Latest Posts

ಷೇರು ಮಾರುಕಟ್ಟೆ ಚೇತರಿಕೆ: ಶೇ. 7.3 ಏರಿಕೆ ಕಂಡ ಸೆನ್ಸೆಕ್ಸ್

ಹೊಸದಿಲ್ಲಿ: ಕೊರೊನಾ ವೈರಸ್ ಸೋಂಕಿನಿಂದಾಗಿ ಲಾಕ್‌ಡೌನ್ ಘೋಷಣೆ ಮಾಡಿದಾಗಿನಿಂದ ಕುಸಿಯುತ್ತಲೇ ಸಾಗಿದ್ದ ಷೇರು ಮಾರುಕಟ್ಟೆ ಮಂಗಳವಾರದ ವಹಿವಾಟಿಲ್ಲಿ ಕೊಂಚ ಚೇತರಿಸಿಕೊಂಡಿದೆ. ಇದರಂತೆ, ಮುಂಬೈ ಶೇರು ಮಾರುಕಟ್ಟೆ ೨೪೭೬ ಅಂಕಗಳಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ೫೬೯ ಪಾಯಿಂಟ್ಸ್ ಏರಿಕೆ ಕಂಡಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್), ಮಂಗಳವಾರ ೨೯,೬೦೫ರಷ್ಟಿದ್ದು, ಶೇ. ೭.೩ರಷ್ಟು ಏರಿಕೆ ಕಂಡಿತ್ತು. ರಾಷ್ಟ್ರೀಯ ಸಂವೇದಿ ಸೂಚ್ಯಂಕವು (ನಿಫ್ಟಿ) ೮,೬೫೨ರಷ್ಟಿದೆ.ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಭಾರೀ ನಷ್ಟ ಅನುಭವಿಸಿದ್ದ ಹೂಡಿಕೆದಾರರು, ಇದೀಗ ಕೊಂಚ ನಿರಾಳರಾಗಿದ್ದಾರೆ. ಮಂಗಳವಾರ ಹೂಡಿಕೆದಾರರಿಗೆ ೬.೬೩ ಲ.ರೂ.ಲಾಭ ಗಳಿಸಿದ್ದಾರೆ.
ಷೇರುಪೇಟೆ ಮೇಲೆ ಕೊರೊನಾ ಎಫೆಕ್ಟ್ ಕಂಟಿನ್ಯೂ, ಪಾತಾಳಕ್ಕೆ ಸೆನ್ಸೆಕ್ಸ್-ನಿಫ್ಟಿ, ಯೆಸ್ ಬ್ಯಾಂಕ್‌ಗೆ ಬಂಪರ್
ಕಳೆದ ಎರಡು ವಾರಗಳಿಂದ ನಿರಂತರ ಕುಸಿತದ ಹಾದಿಯಲ್ಲಿದ್ದ ಷೇರು ಸೂಚ್ಯಂಕಗಳು ಇಂದು ಮತ್ತೆ ಪಾತಾಳಕ್ಕೆ ಇಳಿದಿತ್ತು. ಕೊರೊನಾ ವೈರಸ್ ಭೀತಿಯಿಂದ ಸದ್ಯಕ್ಕೆ ಷೇರುಪೇಟೆ ಚೇತರಿಸಿಕೊಳ್ಳುವ ಯಾವ ಸಾಧ್ಯತೆಯೂ ಸದ್ಯಕ್ಕೆ ಕಾಣುತ್ತಿಲ್ಲ ಎನ್ನಲಾಗಿತ್ತು. ಆದರೆ, ಮಂಗಳವಾರ ವಹಿವಾಟಿನಲ್ಲಿ ಕೊಂಚ ಏರಿಕೆ ಕಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss