ಸಂಗಾತಿ ಬದುಕಿನ ಒಂದು ಭಾಗ. ಸಂಗಾತಿಯೊಂದಿಗೆ ಯಾವ ವಿಚಾರವನ್ನೂ ಮುಚ್ಚಿಡಬಾರದು ಎಂದು ಹೇಳುವುದು ವಾಡಿಕೆ. ಆದರೆ ಸಂಸಾರದ ನೌಕೆ ಸರಿಯಾಗಿ ಸಾಗಬೇಕಾದರೆ ಸಂಸಾರದಲ್ಲಿ ಕೆಲವೊಂದು ಸಿಕ್ರೆಟ್’ಗಳು ಸಿಕ್ರೆಟ್ ಆಗಿ ಇರುವುದೇ ಒಳ್ಳೆಯದು. ಕೆಲವೊಬ್ಬರಿಗೆ ಸಂಗಾಂತಿಯೊಂದಿಗೆ ಯಾವ ವಿಚಾರ ಹೇಳಬೇಕು, ಯಾವ ವಿಚಾರ ಹೇಳಬಾರದು ಎಂಬುದು ಗೊತ್ತಿರುವುದಿಲ್ಲ. ಹಾಗಾಗಿಯೇ ಯಾವ ವಿಚಾರಗಳನ್ನು ಸಂಗಾತಿಯ ಜೊತೆ ಹಂಚಿಕೊಳ್ಳಬಾರದು ಎಂದು ಬರೆದಿದ್ದೇನೆ.
ನಿಮ್ಮ ಕ್ರಶ್ ಬಗ್ಗೆ ಹೇಳ ಬೇಡಿ:
ಯಾರ ಮೇಲೆ ಯಾವಗ ಹೇಗೆ ಕ್ರಶ್ ಆಗುತ್ತದೆ ಹೇಳುವುದಕ್ಕಾಗುವುದಿಲ್ಲ. ಪ್ರತಿಯೊಬ್ಬರಿಗೂ ಒಬ್ಬರು ಸಿಕ್ರೆಟ್ ಕ್ರಶ ಇದ್ದೆ ಇರುತ್ತಾರೆ. ಆದರೆ ನಿಮ್ಮ ಕ್ರಶ್ ಬಗ್ಗೆ ಸಂಗಾತಿಗೆ ಹೇಳಬೇಡಿ. ನೀವು ಆ ಸಂಬಂಧವನ್ನು ತಮಾಷೆಯಾಗೆ ತೆಗೆದುಕೊಂಡು ಹೇಳಬಹುದು. ಅಷ್ಟೇ ತಮಾಷೆಯಾಗಿ ನಿಮ್ಮ ಸಂಗಾತಿ ಅದನ್ನು ತೆಗೆದುಕೊಳ್ಳುವುದಿಲ್ಲ.
ಈ ವಿಷಯ ಮೊದಲೆ ಗೊತ್ತಿದ್ದರೆ ನಿನ್ನನ್ನ ಮದುವೆ ಆಗ್ತಿರಲಿಲ್ಲ:
ಮದುವೆಗೆ ಮೊದಲು ಅಂದುಕೊಂಡಿರುವುದೇ ಒಂದು ಮದುವೆ ಆದಮೇಲೆ ಆಗುವುದೇ ಒಂದು.. ಕೆಲವೊಂದಿಷ್ಟು ವಿಚಾರಗಳು ಮದುವೆ ಆದ ಮೇಲೆ ಗೊತ್ತಾಗುತ್ತದೆ. ಅದು ಗೊತ್ತಾದಗ ಸಹಿಸಿಕೊಳ್ಳಲಾಗುವುದಿಲ್ಲ. ಮದುವೆ ಆಗುವುದಕ್ಕಿಂತ ಮೊದಲೇ ತಿಳಿದಿದ್ದರೆ ಮದುವೆಯೇ ಆಗುತ್ತಿರಲಿಲ್ಲ ಎಂಬ ಮಾತು ಬಾಯಿಂದ ಬಂದು ಬಿಡುತ್ತದೆ. ಆ ಮಾತಿನಿಂದ ನಿಮ್ಮ ಸಂಸಾರ ಎಂದಿಗೂ ಸರಿಯಾಗಲಾರದ ಸ್ಥಿತಿಗೆ ಹೋಗಬಹುದು. ಮದುವೆ ವಿಷಯದಲ್ಲಿ ಮೋಸ ಹೋದ ಎಂಬುದು ಮನಸ್ಸಿನಲ್ಲಿ ಕುಳಿತರೆ ಅದು ಎಂದಿಗೂ ಹೋಗುವುದಿಲ್ಲ. ಆದಷ್ಟು ತಾಳ್ಮೆ ಇಂದ ವರ್ತಿಸಿ.
ಮಾಜಿ ಸಂಬಂಧ ಸಿಕ್ರೆಟ್ ಆಗಿಯೇ ಇರಲಿ:
ಮದುವೆಗೆ ಮೊದಲು ನೀವು ಯಾರನ್ನೋ ಪ್ರೀತಿಸಿರುತ್ತೀರಾ. ಕಾರಣಾಂತರಗಳಿಂದ ಅವರೊಂದಿಗೆ ನಿಮ್ಮ ಮದುವೆ ನಡೆಯುವುದಿಲ್ಲ. ಬೇರೊಬ್ಬರನ್ನು ಮದುವೆ ಆಗುತ್ತೀರ.. ಮದುವೆ ಆದ ಮೇಲೆ ಯಾವ ಕಾರಣಕ್ಕೂ ನಿಮ್ಮ ಹಳೆ ಸಂಬಂಧದ ಬಗ್ಗೆ ಹೇಳಿಕೊಳ್ಳ ಬೇಡಿ. ಹಳೆ ಸಂಬಂಧ ನಿಮ್ಮ ಹೊಸ ಸಂಬಂಧಕ್ಕೆ ಮುಳ್ಳಾಗುವ ಸಾಧ್ಯತೆ ಬಹಳ ಇರುತ್ತದೆ.
ನಿನ್ನ ಮೇಲೆ ಪ್ರೀತಿ ಹುಟ್ಟಿಲ್ಲ:
ಅರೇಂಜ್ಡ ಮ್ಯಾರೇಜ್ ನಲ್ಲಿ ಇಂಥ ಸಮಸ್ಯೆ ಹುಟ್ಟಿ ಕೊಳ್ಳುತ್ತದೆ. ಏಕೆಂದರೆ ಇಲ್ಲಿ ಮದುವೇ ಆದ ಮೇಲೆ ಪ್ರೀತಿಸಲು ಪ್ರಾರಂಭಿಸಬೇಕಾಗುತ್ತದೆ. ನಿಮಗೆ ಪ್ರೀತಿ ಹುಟ್ಟಿಲ್ಲದಿದ್ದರೂ ಪರವಾಗಿಲ್ಲ ಅದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಸಂಗಾತಿಗೆ ನೇರವಾಗಿ ನಿನ್ನ ಮೇಲೆ ಪ್ರೀತಿ ಹುಟ್ಟಿಲ್ಲ ಎಂದು ಹೇಳುವುದರಿಂದ ಅವರ ಪ್ರೀತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಜೀವನ ಪೂರ್ತಿ ಒಟ್ಟಿಗೆ ಬದುಕುವ ಸಂಗಾತಿಯ ಮೇಲೆ ಒಂದಲ್ಲ ಒಂದು ದಿನ ಪ್ರೀತಿ ಹುಟ್ಟೆ ಹುಟ್ಟುತ್ತದೆ.
ಮದುವೆಗೆ ಮೊದಲಿನ ಲೈಂಗಿಕ ಸಂಬಂಧದ ಬಗ್ಗೆ ಹೇಳಲೇ ಬೇಡಿ:
ಮದುವೆ ಆದ ಮೇಲೆ ಸಂಗಾತಿ ಪ್ರಾಮಾಣಿಕತೆ, ಮುಗ್ಧತೆ ನೋಡಿದಾಗ ನಾನು ನನ್ನ ಸಂಗಾತಿಗೆ ಮೋಸ ಮಾಡದೆ. ಹಳೆಯ ತಪ್ಪುಗಳನ್ನು ಸಂಗಾತಿಗೆ ಹೇಳಬೇಕು. ಕ್ಷಮೆ ಕೇಳಬೇಕು ಎನಿಸಬಹುದು. ಕೆಲವೊಬ್ಬರೂ ಹೇಳಿಕೊಂಡೂ ಬಿಡುತ್ತಾರೆ. ಆದರೆ ಎಂದಿಗೂ ಈ ತಪ್ಪನ್ನು ಯಾರೂ ಮಾಡಬೇಡಿ. ಯಾವ ಸಂಗಾತಿಯೂ ಮದುವೆಗೆ ಮೊದಲಿನ ತನ್ನ ಸಂಗಾತಿಯ ಸಂಬಂಧಗಳನ್ನು ಒಪ್ಪಿಕೊಳ್ಳುವುದಿಲ್ಲ. ತನ್ನ ಸಂಗಾತಿಯನ್ನು ಇನ್ನೊಬ್ಬರು ಹಂಚಿ ಕೊಂಡಿರುವುದನ್ನು ಸಹಿಸುವುದಿಲ್ಲ . ನಿಮ್ಮ ಮೇಲಿನ ಗೌರವವನ್ನು ಕೈಯಾರೆ ನಾಶ ಮಾಡಿಕೊಂಡಂತೆ. ಫಾಸ್ಟ್ ಇಸ್ ಫಾಸ್ಟ್ ಎಂದು ಮರೆತು ಬಿಡಿ.
ನಿನ್ನಿಂದ ಲೈಂಗಿಕ ತೃಪ್ತಿ ಸಿಗುತ್ತಿಲ್ಲ.
ಗಂಡ ಹೆಂಡತಿಯ ಜೀವನದಲ್ಲಿ ಸೇತುವೆಯಂತೆ ಇರುವುದು ಲೈಂಗಿಕ ಜೀವನ. ಅದೊಂದು ಇಲ್ಲ ಎಂದಿದ್ದರೆ ಸಂಬಂಧ ಗಟ್ಟಿ ಇರುತ್ತಿರಲಿಲ್ಲ. ಸಂಗಾತಿಯಿಂದ ಎಷ್ಟೊ ಜನರಿಗೆ ಲೈಂಗಿಕ ತೃಪ್ತಿ ಸಿಗುವುದಿಲ್ಲ. ತೃಪ್ತಿ ಸಿಗುತ್ತಿಲ್ಲವೆಂದು ಬಾಯಿ ಬಿಟ್ಟಿ ನೀವು ಸಂಗಾತಿಗೆ ಹೇಳಿದರೆ ಆ ಮಾತು ಅವರನ್ನು ತುಂಬಾ ಸೋಲಿಸಿ ಬಿಡುತ್ತದೆ. ನಿಮ್ಮ ಮೇಲೆ ಅನುಮಾನ ಹೆಚ್ಚುತ್ತದೆ. ಪ್ರೀತಿ ಕಡಿಮೆ ಆಗುತ್ತದೆ. ತೃಪ್ತಿ ಇಲ್ಲದಿದ್ದರೂ ಅದನ್ನು ಸಂಗಾತಿಯೊಂದಿಗೆ ಹೇಳಿಕೊಳ್ಳಬೇಡಿ.
ಮಾಜಿ ಪ್ರೇಮಿ ಫೋನ್ ಕಾಂಟಾಕ್ಟ್ನಲ್ಲಿರುವುದು ಸಂಗಾತಿಗೆ ತಿಳಿಯದಿರಲಿ:
ತುಂಬಾ ಪ್ರೇಮಿಗಳು ಸಂಬಂಧ ಮುರಿದು ಬಿದ್ದ ಮೇಲೂ ಫ್ರೆಂಡ್ಸ್ ಆಗಿ ಇರೋಣ ಎಂದು ಫೋನ್ ಕಾಂಟೆಕ್ಟ್ ನಲ್ಲಿ ಇರುತ್ತಾರೆ. ನಿಮ್ಮ ಸಂಗಾತಿಗೆ ನಿಮಗೆ ಮದುವೆಗೆ ಮೊದಲು ಪ್ರೇಮಿ ಇರುವುದು ಗೊತ್ತಾಗಿದ್ದರೆ, ಈಗಲೂ ನಿಮ್ಮ ಫೋನ್ ಕಾಂಟಾಕ್ಟ್ ನಲ್ಲಿ ಹಳೆ ಪ್ರೇಮಿ ಇದ್ದಿದ್ದರೇ ಅದರ ಬಗ್ಗೆ ಎಂದಿಗೂ ಹೇಳಬೇಡಿ. ನಿಮ್ಮ ಮೇಲೆ ಎಷ್ಟೇ ನಂಬಿಕೆ ಇದ್ದರೂ ನೀವಿಲ್ಲದಾಗ ನಿಮ್ಮ ಮೊಬೈಲ್ ಚೆಕ್ ಮಾಡಬೇಕು ಎನಿಸಬಹುದು. ಅನುಮಾನದ ಸಣ್ಣ ಬೀಜ ದೊಡ್ಡ ಮರವಾಗಿ ಸಂಸಾರ ಗೆದ್ದಲು ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ.
ನಿಮ್ಮ ಅಮ್ಮ ನಂಗೆ ಇಷ್ಟ ಆಗಲ್ಲ.
ಇಂಥ ಮಾತುಗಳನ್ನು ಹೆಚ್ಚಾಗಿ ಹೇಳುವವರು ಹುಡುಗಿಯರು.. ಹುಡುಗರೂ ಹೇಳುತ್ತಾರೆ ಆದರೆ ಕಡಿಮೆ. ಯಾರಿಗೇ ಆಗಲಿ ತಾಯಿಯ ಮೇಲೆ ವಿಶೇಷವಾದ ಪ್ರೀತಿ ಇದ್ದೇ ಇರುತ್ತದೆ. ತಾಯಿ ಎಷ್ಟೇ ಕೆಟ್ಟವಳಾಗಿದ್ದರೂ ಸರಿ. ಅತ್ತೆಯ ಬಗ್ಗೆ ನೆಗೆಟಿವ್ ವಿಷಯಗಳನ್ನು ಗಂಡನಿಗೆ ಹೇಳುತ್ತಿದ್ದರೆ ಅಲ್ಲಿ ಸಣ್ಣವರಾಗುವುದು ನೀವೇ. ನಿಮ್ಮ ಸಂಸಾರವೇ ಹಾಳಾಗುತ್ತದೆ. ಅತ್ತೆಯಿಂದ ಅಷ್ಟೊಂದು ತೊಂದರೆ ಆಗುತ್ತಿದ್ದರೇ ಒಂದಲ್ಲ ಒಂದು ದಿನ ಅದು ನಿಮ್ಮ ಸಂಗಾತಿಗೆ ತಳಿದು ಅವರೇ ಅದನ್ನು ಸರಿ ಮಾಡುತ್ತಾರೆ.
-ಕಾವ್ಯಾ ಜಕ್ಕೊಳ್ಳಿ