Sunday, June 26, 2022

Latest Posts

ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ: ಶಿವಕುಮಾರ್

ಹೊಸ ದಿಗಂತ ವರದಿ, ರಾಮನಗರ:

ಪ್ರತಿಯೊಬ್ಬ ಆಟೋ ಚಾಲಕರು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದರೆ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಾಂತರ ವೃತ್ತ ನಿರೀಕ್ಷಕ ಶಿವಕುಮಾರ್ ಎಚ್ಚರಿಸಿದರು. ಅವರು ನಗರದ ಹೊರವಲಯದ ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ, ಆಟೋ ಚಾಲಕರಿಗೆ ಸಂಚಾರಿ ನಿಯಮಗಳ ಮಾಹಿತಿ ಹಾಗೂ ಎಚ್ಚರಿಕೆ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಫೆ ಆಟೋವಾಗಲಿ, ಪ್ಯಾಸೆಂಜರ್ ಆಟೋಗಳಲ್ಲಿ ನಿಗಧಿತ ಪ್ರಯಾಣಿಕರಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವುದಾಗಿ ಸಾಕಷ್ಟು ದೂರು ಬಂದಿದೆ, ಅಲ್ಲದೆ ಯಾವುದೇ ರೀತಿಯ ದಾಖಲಾತಿಗಳಿಲ್ಲದೆ ವಾಹನಗಳನ್ನು ಚಾಲನೆ ಮಾಡುತ್ತಿರುವುದು ಹಾಗೂ ಕೆಲ ಆಟೋ ಚಾಲಕರು ಹೆಣ್ಣು ಮಕ್ಕಳನ್ನು ಚೂಡಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದಾಗಿ ತಿಳಿಸಿದರು. ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿಬೇಕು, ತಮ್ಮ ವಾಹನಕ್ಕೆ ಅಗತ್ಯವಾಗಿರುವ ಸೂಕ್ತ ದಾಖಲಾತಿಗಳು ತಮ್ಮ ಜೊತೆಯಲ್ಲೇ ಇರಿಸಿಕೊಳ್ಳಬೇಕು, ಅನವಶ್ಯಕವಾಗಿ ರಸ್ತೆ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಬಾರದು, ನಿಗಧಿತ ಪ್ರಯಾಣಿಕ ರಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗಬಾರದು, ಅಲ್ಲದೆ ವಾಹನಗಳನ್ನು ಸೀಮಿತ ವೇಗದಲ್ಲಿ ಚಾಲನೆ ಮಾಡಬೇಕು ಕಾರಣ ಪ್ರಯಾಣಿಕರ ಪ್ರಾಣ ಹಾಗೂ ನಿಮ್ಮ ಪ್ರಾಣ ನಿಮ್ಮ ಕೈಯಲ್ಲೇ ಇರುವುದರಿಂದ ಎಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ ಎಂದರು. ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ.ಶಿವಕುಮಾರ್ ಮಾತನಾಡಿ, ಕೆಲ ಆಟೋ ಚಾಲಕರು ಹೆಣ್ಣು ಮಕ್ಕಳನ್ನು ಚೂಡಾಯಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆoದು ಸಾಕಷ್ಟು ದೂರುಗಳು ಕೇಳಿ ಬಂದಿವೆ. ಈ ವಿಚಾರದಲ್ಲಿ ಸಂಬoಧಿಸಿದ ಚಾಲಕರ ಮೇಲೆ ಯಾವುದೇ ಮೂಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲು ಸಿದ್ದವಿರುವುದಾಗಿ ತಿಳಿಸಿದರು. ಆಟೋದಿಂದಲೇ ತಮ್ಮ ಬದುಕನ್ನು ಹಸನು ಮಾಡಿಕೊಳ್ಳುತ್ತಿರುವ ಚಾಲಕರು, ಪ್ರಮಾಣಿಕತೆಯನ್ನು ಮೈಗೂಡಿಸಿ ಕೊಳ್ಳಿ, ಹೆಣ್ಣು ಮಕ್ಕಳನ್ನು ನಿಮ್ಮ ಸಹೋದರಿಯರಂತೆ ಕಾಣಿ ಯಾರೋ ಒಬ್ಬ ಚಾಲಕ ಈ ರೀತಿಯಾಗಿ ಹೆಣ್ಣುಮಕ್ಕಳ ಜೊತೆ ನಡೆದುಕೊಂಡರೆ ಹಿಡಿ ಆಟೋ ಸಮ್ಮೂಹವನ್ನೆಲ್ಲಾ ಅನುಮಾನದ ದೃಷ್ಠಿಯಿಂದ ನೋಡುತ್ತಾರೆ ಎಚ್ಚರವಿರಲಿ ಎಂದರು.
ಐವತ್ತಕ್ಕೂ ಹೆಚ್ಚು ಆಟೋ ಚಾಲಕರು ಸಭೆಯಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳು ಹಾಗೂ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು, ಪೊಲೀಸ್ ಇಲಾಖೆಯ ಸಲಹೆ, ಸೂಚನೆಗಳನ್ನು ಪಾಲಿಸುವುದಾಗಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss