ಹೊಸ ದಿಗಂತ ವರದಿ, ಶಿವಮೊಗ್ಗ:
ನಗರದ ಕೆ.ಆರ್.ಪುರಂ ರಸ್ತೆಯಲ್ಲಿರುವ ಸಂಜೀವಾಂಜನೇಯ ದೇವಸ್ಥಾನದಲ್ಲಿ ದಾಸ ಶ್ರೇಷ್ಠರಾದ ವಿಜಯದಾಸರ ಆರಾಧನಾ ಮಹೋತ್ಸವವನ್ನು ನಗರದ ಗೆಳೆಯ ವೃಂದದ ವತಿಯಿಂದ ಆಚರಿಸಲಾಯಿತು.
ಈ ಪ್ರಯುಕ್ತ ನಗರದ ಕೆ.ಆರ್.ಪುರಂ, ತಿಮ್ಮಪ್ಪನ ಕೊಪ್ಪಲು ಮತ್ತು ತುಮಕೂರು ಶ್ಯಾಮರಾವ್ ರಸ್ತೆಯ ಬಡಾವಣೆಗಳಲ್ಲಿ ವಿಜಯದಾಸರ ಕೀರ್ತನೆಗಳನ್ನು ಹಾಡುತ್ತ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು.
ಮುರುಳೀಧರ ದೇಶಪಾಂಡೆ, ಹೆಚ್.ಎಸ್.ನಾಗೇಂದ್ರ, ಟಿ.ವಿ.ಬಿಂದುಮಾಧವ, ವಸಂತ ರಾವ್, ಎಮ್.ಜಿ.ವಾಸುದೇವ ಮೂರ್ತಿ, ಶ್ರಿೀಪಾದಾಚಾರ್, ರಾಯಚೂರು ಕೃಷ್ಣಾಚಾರ್, ಶ್ರೀಧರಾಚಾರ್, ಶ್ರಿನಿವಾಸ ರಾವ್, ಭೀಮರಾವ್, ಕುಷ್ಠಗಿ ಸುಧಾ ಅನಂತಾಚಾರ್, ಸುಭದ್ರಾ ವಸಂತರಾವ್, ಗಾಯತ್ರಿ ಅಣ್ಣೀಗೆರೆ, ಕುಷ್ಠಗಿ ಅನಂತಾಚಾರ್, ಇಂದಿರ ವೆಂಕಟೇಶ್, ಸುಭದ್ರಾ ವಸಂತ್, ಸುಮಾಮಣಿ ನಾಗರಾಜ್, ಮೀನಾಕ್ಷಿ ವೇಣುಗೋಪಾಲ್, ಸುಧಾ ಮಾಧವಚಾರ್, ಸುಶೀಲಾ ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.