Tuesday, June 28, 2022

Latest Posts

ಸಂಡೂರು ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳುವುದು ಖಚಿತ: ವಿ.ಅಂಬರೀಶ್ ವಿಶ್ವಾಸ

ಬಳ್ಳಾರಿ: ಬಿಜೆಪಿ ಪ್ರಭಾವಿ ಹಿರಿಯ ನಾಯಕರಾದ ಕಾರ್ತೀಕೇಯ ಎಂ.ಘೋರ್ಪಡೆ ಅವರ ನೇತೃತ್ವದಲ್ಲಿ ಈ ಬಾರಿ ನಮ್ಮ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ಕಾರ್ತೀಕೇಯ ಘೋರ್ಪಡೆ ಅವರ ಅಭಿಮಾನಿಗಳ ಸಂಘದ ಅದ್ಯಕ್ಷ ವಿ.ಅಂಬರೀಶ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಡೂರು ಪಟ್ಟಣದ ಮಹಾರಾಜರ ನಿವಾಸದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಅಭಿಮಾನಿಗಳ ಸಂಘದ ಸದಸ್ಯರ ಸಭೆ ಹಾಗೂ ನೊಂದಣಿ‌ ಪತ್ರ ವಿತರಣಾ ಸಮಾರಂಭದಲ್ಲಿ ಗುರುವಾರ‌ ಮಾತನಾಡಿದರು. ಕಳೆದ ಬಾರಿ ಹಿರೀಯರಾದ ಕಾರ್ತೀಕೇಯ ಎಂ. ಘೋರ್ಪಡೆ ಅವರ‌ ನೇತೃತ್ವದಲ್ಲಿ ನಡೆದ ವಿಧಾನಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ‌ ನಾನಾ ಕಾರಣಗಳಿಂದ ಸೋಲು ಅನುಭವಿಸಬೇಕಾಯಿತು. ಆದರೆ, ಈ ಬಾರಿ ಅದಕ್ಕೆ ಅವಕಾಶ ನೀಡೋಲ್ಲ, ಹಿರೀಯರಾದ ಘೋರ್ಪಡೆ ಮಹಾರಾಜರ ನೇತೃತ್ವದಲ್ಲಿ ಎಲ್ಲ ನಾಯಕರೂ ಸೇರಿ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಬೇಕು ಎಂದು ನಿರ್ಧರಿಸಿದ್ದೇವೆ. ಕಾಂಗ್ರೆಸ್, ಜೆಡಿಎಸ್ ನವರು ಎಷ್ಟೇ ತಿಪ್ಪರಲಾಗಾ ಹಾಕಿದರೂ ಈ ಬಾರಿ‌ ನಮ್ಮ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು. ಅಭಿಮಾನಿಗಳ ಸಂಘದ ನೊಂದಣಿ‌ ಪತ್ರವನ್ನು ನಾಯಕರಾದ ಕಾರ್ತೀಕೇಯ ಎಂ.ಘೋರ್ಪಡೆ ಅವರು ಅಧ್ಯಕ್ಷರಿಗೆ ವಿತರಿಸಿ ಮಾತನಾಡಿ, ನಿಮ್ಮೆಲ್ಲರ ಅಭಿಮಾನ, ಪ್ರೀತಿ, ವಿಶ್ವಾಸಕ್ಕೆ‌ ಚಿರರುಣಿಯಾಗಿರುವೆ, ನಿಮ್ಮೆಲ್ಲರ‌ ಅಭಿಮಾನ ಇದೇ‌ ರೀತಿ ಇರಲಿ, ನಿಮ್ಮ‌ ಭಾವನೆಗಳಿಗೆ ತಕ್ಕಂತೆ ನಡೆದುಕೊಳ್ಳುವೆ, ಕ್ಷೇತ್ರದ ಜನರ ಸೇವೆಯೇ ನನ್ನ ಆದ್ಯತೆ ಎಂದರು. ಅಭಿಮಾನಿಗಳ ಸಂಘದ ಸದಸ್ಯರು,‌ ಮುಖಂಡರು ಸಮಾಜಮುಖಿಯ ಕೆಲಸಗಳನ್ನು ಮಾಡಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ  ಸಿ.ಎಸ್. ನರೇಂದ್ರ ಪಾಟೀಲ್, ಅಧ್ಯಕ್ಷ ವದ್ದಟ್ಟಿ ಅಂಬರೀಶ್, ಉಪಾಧ್ಯಕ್ಷರಾದ ಎಂ.ಷಣ್ಮಖಪ್ಪ ,
ಎನ್.ಎಂ. ಮಂಜುನಾಥ್ ಬಂಡ್ರಿ , ಪ್ರಧಾನ ಕಾರ್ಯದರ್ಶಿ ಎಂ.ವಾಮದೇವ ಖಜಾಂಚಿ ಡಿ.ಪ್ರಹ್ಲಾದ, ಸಂಘಟನಾ ಕಾರ್ಯದರ್ಶಿ ದರೋಜಿ ರಮೇಶ್, ಕಾರ್ಯದರ್ಶಿಗಳಾದ ಕೆ.ವಿಜಯ್ ಕುಮಾರ್, ಎಲ್.ಕುಮಾರ್ ನಾಯ್ಡು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss