ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಂತೋಷವೆಂಬ ಮನಸ್ಥಿತಿ ಹೊಂದುವುದು ಕಷ್ಟದ ಕೆಲಸವಲ್ಲ: ಸಕಾರಾತ್ಮಕ ಆಲೋಚನೆಗಳೇ ಸುಖಕ್ಕೆ ರಹದಾರಿ 

ಕೆಲವೊಮ್ಮೆ ನಮ್ಮ‌ಬಳಿ ಏನೂ ಇಲ್ಲ ಎಂದು ಅನಿಸುತ್ತದೆ. ಆನಂತರ ಎಲ್ಲವನ್ನೂ ಪಡೆಯುವ ಹಂಬಲದಲ್ಲಿ ಜೀವನ ಅನುಭವಿಸುವುದನ್ನೇ‌ ಮರೆಯುತ್ತೇವೆ. ನಂತರ ಬೇಕಿರುವುದೆಲ್ಲ ಸಿಗುತ್ತದೆ. ಆದರೆ ಸಂತೋಷ ? ನಮಗೆ ಬೇಕಿರುವ ವಸ್ತುಗಳು ಸಿಕ್ಕ‌ ನಂತರವೇ ಸಂತೋಷ ಸಿಗುತ್ತದೆ ಎಂಬುದು ಖಂಡಿತಾ ಸುಳ್ಳು. ಗುಡಿಸಲಿನಲ್ಲಿರುವವರು, ದುಡ್ಡಿಲ್ಲದವರು ಖುಷಿಯಾಗಿರುವುದನ್ನು ನೀವು ನೋಡಿಲ್ಲವಾ? ಎಲ್ಲಾ‌ ಇದ್ದೂ ಇನ್ನೇನೋ‌ ಇಲ್ಲ ಎಂದು ಚಡಪಿಸುವುದನ್ನೂ ನೋಡಿರುತ್ತೀರಿ. ಸಂತೋಷ ಎಂಬುದು ಒಂದು  ಮನಸ್ಥಿತಿ ಅಷ್ಟೆ.ನೀವು ನಿಮ್ಮ ಜೀವನವನ್ನು ಹೇಗಿರುತ್ತದೋ ಹಾಗೆ ಒಪ್ಪಿಕೊಂಡು ಅನುಭವಿಸಿದರೆ ಸಂತೋಷ ಏಕೆ ಸಿಗುವುದಿಲ್ಲ? ಕೆಲವೊಮ್ಮೆ ನಮಗೆ ಹೇಗೆ ಖುಷಿಯಾಗಿರಬೇಕು ಎಂದು ತಿಳಿಯದಿದ್ದರೆ ಇನ್ನೊಬ್ಬರ ಜತೆ ಮಾತನಾಡಿ ಕೇಳಿ ತಿಳಿದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ..

  •  ಧ್ಯಾನ ಮಾಡಿ: ನೆಮ್ಮದಿ, ಸಂತೋಷಕ್ಕೆ ಧ್ಯಾನಕ್ಕಿಂತ ಬೇರೆ ಮಾರ್ಗ ಇಲ್ಲ. ಪ್ರತಿದಿನವೂ ಸ್ವಲ್ಪ ದಮಯವಾದರೂ ಧ್ಯಾನ ಮಾಡಿ. ನಿಮ್ಮ ಅಧ್ಯಾತ್ಮಿಕ ಶಕ್ತಿಯ ಗುಣ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ದಿನ ಬೆಳಗ್ಗೆ ಸ್ವಲ್ಪ ಸಮಯ ಧ್ಯಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಖಂಡಿತ.
  • ಶಬ್ದ ಶಕ್ತಿ ಬಳಕೆ: ಶಬ್ದ ಸಂವಹನದ ಮುಖ್ಯ ಅಂಶ. ನಿಮ್ಮ‌ ಮಾನಸಿಕ ಸ್ಥಿತಿ ಬದಲಾವಣೆಗೆ ಶಬ್ದ ಸಹಕಾರಿ. ಎಂದಾದರೂ ಗಮನಿಸಿದ್ದೀರೆ.. ಯಾವುದಾದರೂ ಖುಷಿ ಸಂದರ್ಭದಲ್ಲಿ ನೀವು ಹಾಡು ಕೇಳುತ್ತಿರುತ್ತೀರಿ.‌ಆ ಹಾಡುಗಳ‌ ಮಧ್ಯ ಒಂದು ಬೇಸರ ತರಿಸುವ ಪ್ಯಾಥೋ ಹಾಡು ಬರುತ್ತದೆ. ಒಂದೇ ನಿಮಿಷದಲ್ಲಿ ನಿಮ್ಮ‌ ಖುಷಿ ದುಃಖವಾಗಿ ಬದಲಾಗುತ್ತದೆ. ನಿಮ್ಮ ಜೀವನದಲ್ಲಿ ನಡೆದ ಒಂದು ಕಹಿ ಘಟನೆ‌ ನಿಮ್ಮ ಮುಂದೆ ಬರುತ್ತದೆ. ಹೀಗೆ ಇದನ್ನು ಸಕಾರಾತ್ಮಕವಾಗಿ ಬಳಸಿದರೆ ಲಾಭ ಹೆಚ್ಚು. ಓಂಕಾರಕ್ಕಿರುವ ಶಕ್ತಿ ಯಾವ ಶಬ್ದದಲ್ಲೂ‌ ಇಲ್ಲ.
  • ಆಕಾಶ ನೋಡಿ: ಹೌದು ಇದು ನಿಜ ಆಕಾಶ ಎಲ್ಲರೂ ನೋಡುತ್ತಾರೆ.ಆದರೆ ಆಕಾಶ ನೋಡುವುದು ಒಂದು ರೀತಿ ಧ್ಯಾನವೇ ಹೌದು. ರಾತ್ರಿ ಮಾತ್ರ ಅಲ್ಲ ಬೆಳಗ್ಗೆಯೂ ಕೆಲ ಸಮಯ ಆಕಾಶ ನೋಡಿ.‌ಬೆಳಗ್ಗೆ ನೋಡಿದಾಗ, ನಾನು ಈ ಆಕಾಶ ಈ‌ ಭೂಮಿಯ ಭಾಗ ಎನಿಸುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ರಾತ್ರಿ ನೋಡಿದಾಗ ಇಷ್ಟು ದೊಡ್ಡ ಆಕಾಶದ ಮುಂದೆ ನಾವೆಲ್ಲ ಏನೂ ಅಲ್ಲ ಎನಿಸುತ್ತದೆ.‌ನಾನು ಎಂಬ ಅಹಂ ಭಾವ ಹೋಗುತ್ತದೆ.
  •  ನಿಮಗಿಷ್ಟವಾದದ್ದನ್ನೇ ಮಾಡಿ: ಮನೆಯವರ ಒತ್ತಾಯಕ್ಕೆ, ಸ್ನೇಹಿತರ ಮೇಲೆ ಪ್ರೀತಿಗೆ‌ ಹೀಗೆ ಎಲ್ಲರು ಹೇಳಿದ್ದನ್ನೂ ಕೇಳುತ್ತೇವೆ. ಆದರೆ ನಾವು ಅಂದುಕೊಂಡಿದ್ದನ್ನು ಮಾಡುವುದು ಯಾವಾಗ? ನಿಮಗೆ ಪ್ರೀತಿ ಎನಿಸಿದ್ದು, ಇಷ್ಟವಾದ್ದನ್ನು ಮಾಡಿದರೆ ಸಿಗುವ ಸಂತೋಷಕ್ಕಿಂತ ಬೇರೆ‌ ಸಂತೋಷ‌ ಇಲ್ಲ.
  •  ಕ್ಷಮಿಸಿಬಿಡಿ: ಎಲ್ಲವನ್ನೂ,‌ಎಲ್ಲರನ್ನೂ ಕ್ಷಮಿಸಿಬಿಡಿ. ದ್ವೇಷ ಮಾಡುವುದನ್ನು ನಿಲ್ಲಿಸಿದರೆ ನಿಮ್ಮ ದೇಹದಿಂದ ಕೆಟ್ಟ ಅಂಶಗಳು ಹೋಗುತ್ತವೆ. ಒಬ್ಬ ವ್ಯಕ್ತಿಯನ್ನು ದ್ವೇಷಿಸಿದಷ್ಟು ಕಾಲ ಆ ನಕಾರಾತ್ಮಕ ಭಾವನೆ ನಿಮ್ಮೊಳಗೆ ಇರುತ್ತದೆ. ಯಾರ ಜೀವನದಲ್ಲಿ ಏನೋನು‌ ನಡೆಯುತ್ತಿದೆಯೋ ಯಾರಿಗೆ ತಿಳಿದಿದೆ.
  •  ತಾಳ್ಮೆ ಇರಲಿ: ತಾಳ್ಮೆಗಿರುವ ಶಕ್ತಿ ಮತ್ತೊಂದಕ್ಕಿಲ್ಲ. ಜೀವನದಲ್ಲಿ ಕೆಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಆ ಸಮಯಕ್ಕೆ ಹೆದರಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಮುನ್ನ ಒಮ್ಮೆ‌ ಆಲೋಚಿಸಿ ಕೆಟ್ಟ ಸಮಯ ಶಾಶ್ವತವಲ್ಲ. ತಾಳ್ಮೆಯಿಂದ ಕಾದರೆ ಈ ಕಾಲವೂ ಕಳೆದು ಹೋಗುತ್ತದೆ.‌ಮತ್ತೆ ಎಲ್ಲ ಮೊದಲಿನಂತಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss