ಸಂಪೂರ್ಣ ಲಾಕ್ ಡೌನ್: ಪೊಲೀಸರು ಕ್ರಮ ಕೈಗೊಂಡರೆ ನನ್ನನ್ನು ದೂಷಿಸಬೇಡಿ: ಬಿಎಸ್ ವೈ

0
21

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಸೋಂಕಿಗೆ ಈಗಾಗಲೇ 33 ಮಂದಿ ತುತ್ತಾಗಿದ್ದಾರೆ. ಈ ಹಿನ್ನಲೆ ರಾಜ್ಯ ಸರ್ಕಾರ ಮಾ. 31ರವರೆಗೆ ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಆದೇಶಿಸಿದೆ.  ತುರ್ತು ಕೆಲಸಗಳಿಗೆ ಮಾತ್ರ ಮನೆಯಿಂದ ಹೊರಹೋಗಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾರ್ಚ್. 31ರ ವರೆಗೆ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ ಡೌನ್ ನನ್ನು ಎಲ್ಲರು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಜನರು ಮನೆಯಲ್ಲಿಯೇ ಇರುವಂತೆ ಆದೇಶ ಹೊರಡಿಸಿದ್ದಾರೆ. ಸೋಮವಾರ ರಾತ್ರಿಯಿಂದಲೇ ರಾಜ್ಯದಲ್ಲಿ ವಿಮಾನ ಹಾರಾಟವನ್ನು ರದ್ದು ಮಾಡಲಾಗಿದೆ. ದಯವಿಟ್ಟು ಜನರು ಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸರ್ಕಾರದ ದೇಶವನ್ನು ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಬಂದರೆ ಪೊಲೀಸರು ಅನಿವಾರ್ಯವಾಗಿ ಕ್ರಮ ಕೈಗೊಳ್ಳುತ್ತಾರೆ. ಕೊರೋನಾ ನಿಯಂತ್ರಣಕ್ಕೆ ನಾವು ಎಚ್ಚರಿಕೆಯಿಂದಿರಬೇಕು. ನೀವು ಸರ್ಕಾರದ ನಿಯಮವನ್ನು ಉಲ್ಲಂಘಿಸಿದರೆ ಪೊಲೀಸರು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಆ ಸಂದರ್ಭದಲ್ಲಿ ನಾನು ಅಥವಾ  ರಾಜ್ಯ ಸರ್ಕಾರವನ್ನು ದೂರಬೇಡಿ ಎಂದರು. ಈ ನಿಯಮಗಳು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಅದರಲ್ಲೂ ಬೆಂಗಳೂರಿಗೆ ಇದು ನನ್ನ ಅಂತಿಮ ಆದೇಶ ಮತ್ತು ಮನವಿಯಾಗಿದೆ ಎಂದರು.

ರಾಜ್ಯಾದ್ಯಂತ ಕರ್ಫ್ಯೂ ಇರುವುದರಿಂದ ಯಾರು ತಮ್ಮ ವಾಹನಗಳಲ್ಲಿ ಅನಗತ್ಯ ಓಡಾಡಬಾರದು, ವಿನಾಕಾರಣ ಮನೆಯಿಂದ ಹೊರಗೆ ಬಂದವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ನಾಳೆ ಯುಗಾದಿ ಹಬ್ಬವನ್ನು ಯಾರು ಆಡಂಬರದಿಂದ ಆಚರಣೆ ಮಾಡುವುದು ಬೇಡ ಎಂದು ತಿಳಿಸಿದ್ದಾರೆ. ಜನರಿಗೆ  ದಿನ ನಿತ್ಯ ಅವಶ್ಯಕ ಹಾಲಿ, ತರಕಾರಿ ಮತ್ತು ಹಣ್ಣುಗಳನ್ನು ಪೂರೈಸಲು ಪೊಲೀಸರು ತೊಂದರೆ ಕೊಡಬಾರದು. ಹಬ್ಬದ ಆಚರಣೆಗೆ ವಸ್ತುಗಳ ಖರೀದಿಗೆ ಮಾರ್ಕೆಟ್ ಗಳಿಗೆ ಹೋಗುವುದು ಬೇಡ ಎಂದರು.

LEAVE A REPLY

Please enter your comment!
Please enter your name here