ಮಧುಮೇಹವೆಂದರೆ ಅದೊಂದು ಜೀವಮಾನವಿಡೀ ಕಾಡುವ ಕಾಯಿಲೆ. ನಮ್ಮಿಷ್ಟದ ಆಹಾರ ತಿನ್ನೋಕು ಅಡ್ಡಿ ಮಾಡುವ ಈ ಮಧುಮೇಹದ ಲಕ್ಷಣಗಳೇನು ಗೊತ್ತಾ? ಈ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಖಂಡಿತ ವೈದ್ಯರನ್ನು ಭೇಟಿ ಮಾಡೋದನ್ನು ಮರಿಬೇಡಿ..
ಹೆಚ್ಚು ಮೂತ್ರವಿಸರ್ಜನೆ: ಆಗಾಗ ಮೂತ್ರ ವಿಸರ್ಜನೆ ಮಾಡುವುದು ಮಧುಮೇಹದ ಲಕ್ಷಣವಾಗಿದೆ. ರಾತ್ರಿ ನಿದ್ದೆಗೆಡಿಸಿ ಹಲವು ಸಲ ಶೌಚಾಲಯಕ್ಕೆ ತೆರಳುವವರು ವೈದ್ಯರನ್ನು ಭೇಟಿ ಮಾಡಿ.
ತೂಕ ಇಳಿಕೆ: ಮೂತ್ರ ವಿಸರ್ಜನೆ ಹೆಚ್ಚಾಗಿ ದೇಹದಲ್ಲಿನ ಶಕ್ತಿ ಕಡಿಮೆಯಾಗುತ್ತದೆ. ಇದು ನಮ್ಮ ದೇಹದ ತೂಕವನ್ನು ಕಡಿಮೆಗೊಳಿಸುವುದು.
ಕಣ್ಣಿನ ತೊಂದರೆ: ಕಣ್ಣಿನಲ್ಲಿ ನೀರಿನಾಂಶ ಕಡಿಮೆಯಾಗಿ ಕಣ್ಣು ಮಬ್ಬಾಗಿ ಕಣ್ಣಿನ ದೃಷ್ಟಿಕೋನಕ್ಕೆ ತೊಂದರೆಯಾಗುತ್ತದೆ.
ಒಣಗದ ಗಾಯ: ದೇಹದ ಯಾವುದೇ ಭಾಗಕ್ಕೆ ಗಾಯವಾದರೂ ಕೆಲವೇ ನಿಮಿಷಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಸಹಜ. ಆದರೆ ಮಧುಮೇಹ ಇರುವವರಿಗೆ ಗಾಯ ಬೇಗ ಒಣಗುವುದಿಲ್ಲ.
ಜಾಸ್ತಿ ಹಸಿವು: ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲಿ ಏರಿಳಿತವಾಗುವುದರಿಂದ ನಿಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಹೆಚ್ಚು ಹಸಿವಾಗುತ್ತದೆ.