Wednesday, June 29, 2022

Latest Posts

ಸಕ್ಕರೆ ಕಾಯಿಲೆ ಇರುವವರು ಸೇವಿಸಬಹುದಾದ ಆಹಾರಗಳು: ಉಪಯುಕ್ತ ಮಾಹಿತಿ ನಿಮಗಾಗಿ

ಈಗಿನ ಕಾಲದಲ್ಲಿ ಸಕ್ಕರೆ ಕಾಯಿಲೆ ಹೆಚ್ಚಿನ ಜನರಲ್ಲಿ ಕಾಣಬರುವ ಸಹಜ ಕಾಯಿಲೆಯಾಗಿದೆ. ಆದರೆ ಈ ಮಧುಮೇಹವನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಪ್ರಯತ್ನ ಪಟ್ಟರು ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿಸುವುದು ಕಷ್ಟ. ಅದರಲ್ಲೂ ಆಹಾರ ಪ್ರಿಯರನ್ನೂ ಡಯಟ್ ನಲ್ಲಿರಿಸಲು ಕಷ್ಟ ಸಾಧ್ಯವೇ ಸರಿ..

ಬನ್ನಿ ಹಾಗಿದ್ದರೆ ಸಕ್ಕರೆ ಕಾಯಿಲೆ ಇರುವವರು ಯಾವೆಲ್ಲಾ ಆಹಾರ ತಿನ್ನಬಹುದು ಎಂದು ತಿಳಿಯೋಣ..

ಜೇನು ತುಪ್ಪ: ಮಧುಮೇಹದಿಂದ ಬಳಲುತ್ತಿರುವವರಿಗೆ ಸಿಹಿ ಎಂದರೆ ತುಂಬಾ ಇಷ್ಟ. ಆದರೆ ಸಿಹಿ ತಿಂಡಿಗಳಲ್ಲಿ ಸಕ್ಕರೆ ಬಳಸುವ ಬದಲು ಜೇನುತುಪ್ಪ ಬಳಸುವುದು ಉತ್ತಮ.

ಹಾಗಲಕಾಯಿ: ಹಾಗಲಕಾಯಿ ನಮ್ಮ ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

ಬಾರ್ಲಿ: ಬಾರ್ಲಿ ಯಲ್ಲಿ ತಯಾರಿಸುವ ಆಹಾರಗಳನ್ನು ತಿನ್ನುವುದು ಒಳ್ಳೆಯದು.

ಮೆಂತ್ಯ: ಮೆಂತ್ಯ ತಿನ್ನುವುದರಿಂದ ಸಕ್ಕರೆ ನಿಯಂತ್ರಣಕ್ಕೆ ತರಲು ಸಹಾಯವಾಗುತ್ತದೆ. ಪ್ರತಿದಿನ ಮೆಂತ್ಯ ನೀರು, ಮೆಂತ್ಯ ದೋಸೆ ಸೇರಿದಂತೆ ಇತರೆ ಆಹಾರ ಸೇವನೆ ಉತ್ತಮ.

ಸೊಪ್ಪು: ಪಾಲಕ್ ಸೊಪ್ಪು, ಬಸಲೆ ಸೊಪ್ಪು, ಕರಿಬೇವಿನ ಸೊಪ್ಪು ಸಕ್ಕರೆ ಅಂಶ ಹೆಚ್ಚಿಸುವುದಿಲ್ಲ.

ಮೊಟ್ಟೆ: ಪ್ರತಿ ದಿನ ಮೊಟ್ಟೆ ತಿನ್ನುವುದರಿಂದ ಡಯಾಬಿಟೀಸ್ ಇರುವವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತದೆ.

ಬೀನ್ಸ್: ಹುರಳಿಕಾಯಿಯಲ್ಲಿನ ಮಿನರಲ್ಸ್,ವಿಟಮಿನ್ ಬಿ ಹೆಚ್ಚಾಗಿದ್ದು, ಸಕ್ಕರೆ ಅಂಶ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಧುಮೇಹದಿಂದ ಬಳಲುತ್ತಿರುವವರು ಆಲೂಗಡ್ಡೆ, ಸಕ್ಕರೆ, ಅನ್ನದ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಿದರೆ ಉತ್ತಮ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss