ಮಧುಮೇಹ ಇದು ಇತ್ತೀಚೆಗೆ ಮನೆಯಲ್ಲಿ ಒಬ್ಬಿಬ್ಬರಿಗೆ ಸಾಮಾನ್ಯವಾಗಿ ಇರುವಂಥ ರೋಗ. ಈ ಮಧುಮೇಹ ಹೆಚ್ಚಾಗಿ ವಂಶವಾಹಿಯಾಗಿ ಬರುವಂಥದ್ದು.ಮನೆಯಲ್ಲಿ ತಂದೆ ಅಥವಾ ತಾಯಿಗಿದ್ದರೆ ಮಕ್ಕಳಿಗೆ ಬರುತ್ತದೆ. ನಂತರ ಅವರ ಮಕ್ಕಳಿಗೆ ಹೀಗೆ ಮುಂದುವರೆಯುತ್ತಿರುತ್ತದೆ. ಕೆಲವೊಂದಿಷ್ಟು ಜನರಲ್ಲಿ ತಪ್ಪು ತಿಳುವಳಿಕೆ ಇದೆ. ಸಕ್ಕರೆ ತಿಂದರೆ ಸಕ್ಕರೆ ಕಾಯಿಲೆ ಬರುತ್ತದೆಂದು. ಆದರೆ ಸಕ್ಕರೆ ಕಾಯಿಲೆ ಬರುವುದು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಉತ್ಪತ್ತಿಯಾದಾಗ. ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಹೋಗುವಂತದ್ದಲ್ಲ ಆದರೆ ಅದನ್ನು ಮಿತಿಯಲ್ಲಿ ಇಡಬಹುದು. ಅದಕ್ಕೆ ಮನೆಮದ್ದುಗಳು ಸಾಕಷ್ಟಿವೆ.
- ಮೆಂತ್ಯ ಸೇವನೆ: 1/4 ಚಮಚ ಮೆಂತ್ಯ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ನೀರಿನ ಸಮೇತ ಮೆಂತ್ಯವನ್ನು ತೆಗೆದುಕೊಳ್ಳಬೇಕು. ಮೆಂತ್ಯ ಸೇವನೆಯಿಂದ ಮಧುಮೇಹ ನಿಯಂತ್ರಣವಾಗುತ್ತದೆ ಮೆಂತ್ಯದಲ್ಲಿ ಕಹಿ ಅಂಶ ಹೆಚ್ಚು ಇರುತ್ತದೆ.
- ಹಾಗಲಕಾಯಿ ಜ್ಯೂಸ್: ಹಾಗಲಕಾಯಿಯ ರಸವನ್ನು ತೆಗೆದು ಅದನ್ನು ಖಾಲಿ ಹೊಟ್ಟೆಯಲ್ಲಿ ದಿನ ಬೆಳಿಗ್ಗೆ ಕುಡಿಯಬೇಕು. ಇದರಲ್ಲಿ ಉಷ್ಣ ಅಂಶ ಹೆಚ್ಚು ಹಾಗಾಗಿ ಇದನ್ನು ಕುಡಿದರೆ ನೀರನ್ನು ಜಾಸ್ತಿ ಕುಡಿಯಬೇಕು.
- ನಿತ್ಯಪುಷ್ಪದ ಎಲೆ: ನಿತ್ಯಪುಷ್ಪದ ಎಲೆಯನ್ನು ದಿನ ನಿತ್ಯ ಎರಡರಿಂದ ಮೂರು ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ.ಹಾಗಾಗಿ ದಿನವೂ ನಿತ್ಯ ಪುಷ್ಪ ಎಲೆಯನ್ನು ಸೇವಿಸಬೇಕು.
- ಗ್ರೀನ್ ಟೀ: ಗ್ರೀನ್ ಟೀ ಕುಡಿದರೆ ದೇಹದಲ್ಲಿ ಸಕ್ಕರೆ ಅಂಶ ಮತ್ತು ಇನ್ಸುಲಿನ್ ಪ್ರಮಾಣ ಕುಂಠಿತವಾಗುತ್ತದೆ. ಸಕ್ಕರೆ ಟೀ ಸೇವನೆ ಬಿಟ್ಟು ಗ್ರೀನ್ ಟೀ ಸೇವಿಸಬೇಕು.
- ಪಪ್ಪಾಯ ಸೇವನೆ: ಪಪ್ಪಾಯ ಹಣ್ಣನ್ನು ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರುತ್ತದೆ. ಪಪ್ಪಾಯ ಹಣ್ಣಿನಲ್ಲಿ ಸಕ್ಕರೆ ಕಾಯಿಲೆ ತಡೆಯುವ ಶಕ್ತಿ ಇದೆ.
- ಮಾವಿನ ಎಲೆ: ಮಾವಿನ ಎಳೆಯ ಎಲೆಯನ್ನು ದಿನ ನಿತ್ಯ ತಿನ್ನ ಬೇಕು. ಅದರಲ್ಲಜ ಇರುವ ತೊಗರು ಅಂಶ ಮಧುಮೇಹಬರದಂತೆ ತಡೆಯುತ್ತದೆ.
- ಶುಂಠಿ, ಬೆಳ್ಳುಳ್ಳಿ ಸೇವನೆ: ಆಹಾರ ಪದಾರ್ಥಗಳಲ್ಲಿ ಹೆಚ್ಚು ಹೆಚ್ಚು ಶುಂಠಿ ಬೆಳ್ಳುಳ್ಳಿಯನ್ನು ಸೇವಿಸ ಬೇಕು. ಇದನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗುತ್ತದೆ.
- ನೆಲ್ಲಿಕಾಯಿ: ನೆಲ್ಲಿಕಾಯಿ ಜ್ಯೂಸ್ ಮಾಡಿಕೊಂಡು ಅಥವಾ ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಮಧುಮೇಹ ತಡೆಯಬಹುದು.