Friday, July 1, 2022

Latest Posts

ಸಕ್ಕರೆ ಕಾರ್ಖಾನೆ ಹಾನಿ ಬಗ್ಗೆ ಡಿಸಿಎಂ ಜನರ ಮುಂದೆ ಬಹಿರಂಗಪಡಿಸಲಿ : ತಿಮ್ಮಾಪುರ

ಬಾಗಲಕೋಟೆ: ಮುಧೋಳದ ರನ್ನ ನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ‌ ಕಾರ್ಖಾನೆಯಲ್ಲಿ ಆದಂತಹ ಹಾನಿ ಹಾಗೂ ಕಾರ್ಖಾನೆಯ ದುಃಸ್ಥಿಗೆ ಕಾರಣಿಭೂತರಾದವರ ಬಗ್ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಜನತೆಯ ಮುಂದೆ ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಆರೋಪಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ಸಹಕಾರಿಯಾಗಿದ್ದ ಕಾರ್ಖಾನೆ ಹಾನಿ ಸಂಭವಿಸಿ ಇಷ್ಟು ಗೊಂದಲ‌ ಎದ್ದರೂ ಯಾಕೆ ಕಾರಜೋಳವರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ರೈತರ ಸಹಕಾರಿ ಕಾರ್ಖಾನೆಯಲ್ಲಿ ಸಧ್ಯ ೨೫ ಕೋಟಿ ರೈತರ ಶೇರು ಹಾಗೂ ಸರ್ಕಾರದ ೧೨ ಕೋಟಿ ಶೇರು ಇದ್ದು, ರೈತರ ಬಾಕಿ ೩೧ ಕೋಟಿ, ಕಳೆದ ವರ್ಷದ ಬಾಕಿ, ನೌಕರರ ವೇತನ ಬಾಕಿ ಕೂಡ ನೀಡಿಲ್ಲ ಎಂದರು.
ಕಾರ್ಖಾನೆಯಲ್ಲಿ ಸಧ್ಯ ೧೪೮ ಕೋಟಿ‌ ಹಾನಿ ಹಾಗೂ ೨೬೮ ಕೋಟಿಯಷ್ಟು ಸಾಲವನ್ನು ಸಹ ಮಾಡಲಾಗಿದೆ. ಇದೆಲ್ಲದಕ್ಕೆ ಈಗಿರುವ ಆಡಳಿತ ಮಂಡಳಿ ಇಷ್ಟೊಂದು ಹಾನಿ ಮಾಡಲು ಕಾರಣರಾಗಿದ್ದು ಈ ಬಗ್ಗೆ ಜನರ ಮುಂದೆ‌ ಬಹಿರಂಗ ಪಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಡಿಸಿಎಂ‌ ಗೋವಿಂದ ಕಾರಜೋಳ ಅವರು ತಕ್ಷಣ ಮಧ್ಯ ಪ್ರವೇಶ ಮಾಡಿ ರೈತರ ಕಾರ್ಖಾನೆಯನ್ನು ಉಳಿಸಬೇಕು. ಯಾವುದೇ ಕಾರಣಕ್ಕೂ ಲೀಸ್ ಕೊಡಬಾರದು ಎಂದರು.
೯೭ ಕೋಟಿಯಷ್ಟು ಹಣದಲ್ಲಿ ನಿರ್ಮಾಣ ವಾದ ಕಾರ್ಖಾನೆಯಲ್ಲಿ ಇಷ್ಟು ಹಾನಿ ಸಂಭವಿಸಿದರೂ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ.ಹಾ‌ನಿ ಅನುಭವಿಸುತ್ತಿರುವ ಸಕ್ಕರೆ ಕಾರ್ಖಾನೆಗೆ ಸರ್ಕಾರ ನೆರವು ನೀಡಿ ರೈತರ ಕಾರ್ಖಾನೆ ಉಳಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಡಿಜೆ‌ಮತ್ತು ಕೆಜಿ ಹಳ್ಳಿಯಲ್ಲಿ ನಡೆದ‌ ಗಲಭೆಗೆ ಕಾತಣಿಭೂತರಾದವರಿಗೆ ತಕ್ಕ‌ಶಿಕ್ಷೆ ಆಗಬೇಕು.ತಪ್ಪಿತಸ್ತರ ಮೇಲೆ ಸರ್ಕಾರ‌ ಕ್ರಮ ಕೈಗೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ‌‌ ಮಾತನಾಡಿ, ಸರ್ಕಾರ ಡ್ಯಾಂ,ನೀರು,ರಸ್ತೆಯಲ್ಲಿ ದುಡ್ಡು‌ಹೊಡೆದಂತೆ‌ ಕೊರೋನಾ ರೋಗದ‌ಮೇಲೆಯೂ ಹಣ ಹೊಡೆಯುವ ಕೆಲಸ ಮಾಡುತ್ತಿದೆ. ಒಬ್ಬ ಕೊರೋನಾ ಸೋಂಕಿತರಿಗೆ ಸರ್ಕಾರ‌ಎಷ್ಟು ಖರ್ಚು ಮಾಡುತ್ತಿದೆ ಎಂದು ಜನರ ಮುಂದೆ‌ ಇಡಬೇಕು. ಇನ್ನೂ ರೋಗ ನಿಯಂತ್ರಣಕ್ಕೆ ಸರ್ಕಾರ‌ ಇತ್ತೀಚಿಗೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss