ಹೊಸದಿಗಂತ ವರದಿ,ಮಂಡ್ಯ:
ಸಂಕ್ರಾಂತಿ ಸಂಭ್ರಮದ ಸಂದರ್ಭದಲ್ಲಿ ಮಂಡ್ಯಕ್ಕೆ 8000 ಸಾವಿರ ಕೋವಿಶೀಲ್ಡ್ ಕೊರೋನಾ ಲಸಿಕೆ ಆಗಮಿಸಿದೆ. ಗುರುವಾರ ಮೈಸೂರಿಂದ ಮಂಡ್ಯಕ್ಕೆ ಬಂದ ಲಸಿಕೆಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಪಿ. ಮಂಚೇಗೌಡ ಸ್ವಾಗತಿಸಿ, ಪೂಜೆ ಸಲ್ಲಿಸಿದರು.
ಬಳಿಕ ಡಿಎಚ್ಓ ಕಚೇರಿ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಅಳವಡಿಸಿರುವ ಐಸ್ ಲೈಂಡ್ ಲೇಫ್ರಿಜಿರೇಟರ್ನಲ್ಲ್ ಶೇಖರಣೆ ಮಾಡಲಾಗಿದೆ. ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 15316 ಮಂದಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಶನಿವಾರ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಲಿದೆ. ಮಂಡ್ಯ ಜಿಲ್ಲೆಯಲ್ಲಿ ಮಿಮ್ಸ್ ಸೇರಿದಂತೆ 8 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಥತೆ ನಡೆಸಲಾಗಿದೆ ಎಂದು ಡಿಎಚ್ಓ ಡಾ. ಎಚ್.ಪಿ.ಮಂಚೇಗೌಡ ತಿಳಿಸಿದರು.
ಮಂಡ್ಯದ ವೈದ್ಯಕೀಯ ಕಾಲೇಜು, ಆರು ತಾಲೂಕು ಆಸ್ಪತ್ರೆಗಳು, ಮಂಡ್ಯ ತಾಲೂಕು ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 8 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಈಗಾಗಲೇ ಆನ್ಲೈನ್ ನೋಂದಾಯಿಸಿಕೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ಅವರು ಹೇಳಿದರು.