ಸಿಂಪಲ್ ಸುನಿ ಮತ್ತು ಗಣೇಶ್ ಜೋಡಿ ಮತ್ತೆ ಪ್ರೇಕ್ಷಕರಿಗೆ ಮೋಡಿ ಮಾಡಲು ತಯಾರಾಗಿದೆ. ಈ ಬಾರಿ ಸಖತ್ ಎಂಬ ಸಿನಿಮಾದೊಂದಿಗೆ ಇಬ್ಬರೂ ಜೊತೆಯಾಗುತ್ತಿದ್ದಾರೆ. ಸಖತ್ ಸಿನಿಮಾದ ಮೋಷನ್ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ನಿಜಕ್ಕೂ ಸಖತ್ ಆಗಿದೆ ಪೋಸ್ಟರ್. ಪೋಷನ್ ಪೋಸ್ಟರ್ ಹಿನ್ನೆಲೆ ರಾಂಪ್ ಹಾಡು ಸಹ ಗುನುಗುವಂತಿದೆ.ಸಖತ್ ನ ಪೋಷನ್ ಪೋಸ್ಟರ್ ನ ರ್ಯಾಪ್ ಹಾಡಿನಲ್ಲಿ ಗಣೇಶ್ ಅವರಿಗೆ ಹೊಗಳಿಕೆಯ ಹೂಮಾಲೆಯನ್ನೇ ಪೋಣಿಸಲಾಗಿದೆ. ಪೋಸ್ಟರ್ ಸಹ ಸಖತ್ ಕಲರ್ಫುಲ್ ಆಗಿದೆ . ಇದ್ದರಿಂದ ಗಣೇಶ್ ಅಭಿಮಾನಿಗಳಿಗೆ ಹಬ್ಬ ಮನೆ ಮಾಡಿದೆ .ಸಿಂಪಲ್ ಸುನಿ ಮತ್ತು ಗಣೇಶ್ ಒಟ್ಟಾಗಿರುವ ಎರಡನೇ ಸಿನಿಮಾ ಇದೆ. ಈ ಮೊದಲು ಚಮಕ್ ಸಿನಿಮಾಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ಈ ಜೋಡಿಯ ಎರಡನೇಯ ಸಿನಿಮಾ.ಸಿಂಪಲ್ ಸುನಿ ಗಣೇಶ್ ಅವರೊಂದಿಗೆ ಮತ್ತೊಂದು ಸಿನಿಮಾವನ್ನು ನಿನ್ನೆಯಷ್ಟೆ ಘೋಷಿಸಿದ್ದು, ಅದರ ಹೆಸರು ರಾಯಘಡ. ಇದಕ್ಕೆ ಗಣೇಶ್ ಅವರೇ ನಾಯಕಾರಿದ್ದು, ಸಿನಿಮಾದಲ್ಲಿ ರಗಡ್ ಲುಕ್ನಲ್ಲಿ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ