ಹೊಸ ದಿಗಂತ ಆನ್ಲೈನ್ ಡೆಸ್ಕ್:
ಆಸ್ಟ್ರೇಲಿಯಾದ ಜಿಮ್ನಲ್ಲಿ ಕಸರತ್ತು ಮಾಡುತ್ತಿರುವ ಟೀಮ್ ಇಂಡಿಯಾದ ದೃಶ್ಯಗಳು ಈಗ ಸಖತ್ ವೈರಲ್ ಆಗುತ್ತಿದೆ.
ಸಿಡ್ನಿಯ ಒಲಂಪಿಕ್ ಪಾರ್ಕ್ ಹೊಟೆಲ್ನಲ್ಲಿ ಕ್ವಾರಂಟೈನ್ ನಲ್ಲಿರುವ ಟೀಂ ಇಂಡಿಯಾದ ಆಟಗಾರರಿಗೆ ಸರ್ಕಾರ ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡಿದೆ.
ಬಿಸಿಸಿಐ ಆಟಗಾರರ ಅಭ್ಯಾಸ ಹಾಗೂ ವರ್ಕ್ ಔಟ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಿಷತ್ ಪಂತ್, ಬೌಲರ್ ಟಿ. ನಟರಾಜನ್, ಚೇತೇಶ್ವರ್ ಪೂಜಾರ, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಈ ಚಿತ್ರಗಳಲ್ಲಿದ್ದಾರೆ.
ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರು ಕೂಡಾ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. 69 ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಎಲ್ಲಾ ಫಾರ್ಮಾಟ್ ಗಳಲ್ಲೂ ಆಸ್ಟ್ರೇಲಿಯಾ ತಂಡದ ಜೊತೆ ಸೆಣೆಸಲಿದ್ದು, ನ.27ರಿಂದ ಏಕದಿನ ಪಂದ್ಯ ಪ್ರಾರಂಭವಾಗಲಿದೆ.