Tuesday, August 9, 2022

Latest Posts

ಸಚಿವ ಜಗದೀಶ್ ಶೆಟ್ಟರ್ ಪುತ್ರನ ಕಾರು ಅಪಘಾತ: ಮೂವರಿಗೆ ಸಣ್ಣಪುಟ್ಟ ಗಾಯ

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಯಾಣಿಸುತ್ತಿದ್ದ ಕಾರು ದಾವಣಗೆರೆಯ ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಪ್ರಶಾಂತ್ ಶೆಟ್ಟರ್, ಪತ್ನಿ ಅಂಚಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಡಿವೈಡರ್ ಬಳಿ KA-05 AR-6577 ನಂಬರ್​ನ ಲಾರಿ, KA 03 NE 8 ನಂಬರ್​ನ ಲ್ಯಾಂಡ್ ರೋವರ್ ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೈಟೆಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ದಾವಣಗೆರೆಯಿಂದ ಹುಬ್ಬಳ್ಳಿಯ ನಿವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತವಾಗಿದೆ. ಸ್ಥಳಕ್ಕೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಕಿರಣ್‌ಕುಮಾರ್ ಭೇಟಿ ನೀಡಿ, ಪರಿಶೀಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss