ಹೊಸದಿಗಂತ ಆನ್ ಲೈನ್ ಡೆಸ್ಕ್:
ನೂತನ ಸಚಿವರುಗಳ ಖಾತೆ ಹಂಚಿಕೆ ಹಾಗೂ ಹಲವು ಸಚಿವರ ಖಾತೆ ಬದಲಾವಣೆಯು ಕಾನೂನು ಸಚಿವ ಮಾಧುಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವರ ಖಾತೆ ಹಂಚಿಕೆ ಕುರಿತು ಮಾತನಾಡಿದ ಅವರು, ಸಚಿವರ ತಂಡದಲ್ಲಿ ಯಾರು ಇರಬೇಕು? ಯಾರಿಗೆ ಯಾವ ಸ್ಥಾನ ನೀಡಬೇಕು ಎನ್ನುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು, ಆದರೆ ನನ್ನ ಖಾತೆ ಬದಲಾವಣೆ ಬಗ್ಗೆ ಸಿಎಂ ನನ್ನ ಜೊತೆ ಮಾತನಾಡಿಲ್ಲ ಎಂದು ತಿಳಿಸಿದರು.
ಈ ಬಳಿಕ ಸಂಜೆ ನಡೆಯುವ ಸಚಿವ ಸಂಪುಟ ಸಭೆಗೂ ಗೈರಾಗುವ ಸಾಧ್ಯತೆ ಇದೆ ಎಂದರು. ಕೇಂದ್ರ ಸಚಿವರ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯಬೇಕಿದ್ದು, ಸಂಜೆ ಸಂಪುಟ ಸಭೆಗೆ ಹೋಗುವುದರ ಕುರಿತು ಚಿಂತೆ ನಡೆಸಿಲ್ಲ ಎಂದರು.
ಸಣ್ಣ ನೀರಾವರಿ ಖಾತೆಗೆ ಬದಲಾವಣೆಯಿಂದ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.