Wednesday, August 17, 2022

Latest Posts

ಸಚಿವ ಸಂಪುಟ ವಿಸ್ತರಣೆ ಸಿಎಂ ಯಡಿಯೂರಪ್ಪರ ಪರಮಾಧಿಕಾರ: ಸಚಿವ ಎಸ್.ಟಿ.ಸೋಮಶೇಖರ

ಹಾವೇರಿ: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್.ಉಡಿಯೂರಪ್ಪ ಅವರಿಗೆ ಪರಮಾಧಿಕಾರವಿದೆ. ಅದನ್ನ ಪ್ರಶ್ನೆ ಮಾಡೋದು ನನಗಾಗಲಿ, ಬಿ.ಸಿ.ಪಾಟೀಲರಿಗಾಗಲಿ ಹಕ್ಕಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.
ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡ್ತಾರೆ ಎಂದರು.
ಮಾಜಿ ಸಚಿವ ಎಚ್.ವಿಶ್ವನಾಥಗೆ ಎಂಎಲ್‌ಸಿ ಸ್ಥಾನ ಸಿಗದಿರೋ ವಿಚಾರದ ಬಗ್ಗೆ ಹೈಕಮಾಂಡ್ ನವರು ಗಮನಹರಿಸ್ತಾರೆ.
ಹುಬ್ಬಳ್ಳಿ-ಧಾರವಾಡ-ಹಾವೇರಿ, ಶಿವಮೊಗ್ಗಾ-ದಾವಣಗೇರಿ ಜಿಲ್ಲೆಗಳಿಗೆ ಸೇರಿದ ಡಿ.ಸಿ.ಸಿ ಬ್ಯಾಂಕ್ ಸ್ಥಾಪನೆಗೆ ನಬಾರ್ಡ್ ಕೆಲ ನಿಬಂಧನೆಗಳನ್ನು ನಿಧಿಸಿದ್ದು ಬರುವ ತಿಂಗಳು ಎರಡನೇ ತಾರೀಖಿನ ನಂತರ ಆಯಾ ಜಿಲ್ಲೆಗಳ ಸಹಕಾರಿಗಳನ್ನು ಕರೆದು ನಬಾರ್ಡ್ ತಿಳಿಸಿರುವ ಅಂಶಗಳನ್ನು ಪೂರ್ಣಗೊಳಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಹೇಳಲಾಗುವುದು ಎಂದು ಹೇಳಿದರು.
ಸಹಕಾರಿ ಸಂಸ್ಥೆಗಳಲ್ಲಿ ಅರ್ಹ ರೈತರಿಗೂ 3 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ನೀಡುವ ಬದಲು ಎಕರೆಗೆ ಹತ್ತಿಪ್ಪತ್ತು ಸಾವಿರ ರೂಗಳನ್ನು ಮಾತ್ರ ನೀಡಲಾಗುತ್ತಿದೆ ಇದರಿಂದ ರೈತರಿಗೆ ಬಹಳ ತೊಂದರೆ ಆಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಈ ಕುರಿತು ಎಲ್ಲ ಸಹಕಾರಿ ಅಂಘಗಳ ಅಧ್ಯಕ್ಷರು ಮತ್ತು ಎಂಡಿಗಳ ಸಭೆಯನ್ನು ಸಧ್ಯದಲ್ಲೇ ಕರೆಯಲಾಗುವುದಲ್ಲದೆ ಎಷ್ಟು ರೈತರಿಗೆ ಮತ್ತು ಯಾವ ಯಾವ ವರ್ಗಗಳಿಗೆ ಎಷ್ಟು ಮೊತ್ತದ ಸಾಲವನ್ನು ನೀಡಲಾಗಿದೆ ಶ್ಯೂನ್ಯ ಬಡ್ಡಿದರದಲ್ಲಿ ಎಷ್ಟು ಹಣವನ್ನು ನೀಡಲಾಗಿದೆ ಎನ್ನುವ ಮಾಹಿತಿಯನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾಲವನ್ನು ಮರು ಪಾವತಿ ಮಾಡಿದವರಿಗೆ ಮರು ಸಾಲವನ್ನು ನೀಡುವುದು, ಸಹಕಾರಿ ಸಂಸ್ಥೆಯಲ್ಲಿ ಒಬ್ಬ ರೈತರಿಗೆ ಸಾಲವನ್ನು ನೀಡದಂತೆ ಠರಾವನ್ನು ಮಾಡುವುದಕ್ಕೆ ಬರುವುದಿಲ್ಲ. ಸಹಕಾರಿ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರು ನೀಡಿದ ರೈನಿಗೆ ಸಾಲ ನೀಡುವುದಿಲ್ಲ ಎನ್ನಲಾಗದು, ಅವ್ಯವಹಾರ ಕುರಿತು ತನಿಖೆ ಮಾಡಬೇಕು ಅದನ್ನು ಬಿಟ್ಟು ಸಾಲ ನೀಡಲಾಗುವುದಿಲ್ಲ ಎಂದು ಠರಾವ ಮಾಡುವುದಕ್ಕೆ ಬರುವುದಿಲ್ಲ ಈ ಕುರಿತು ಸೋಮವಾರ ಕಾನೂನು ರೀತಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮತ್ತಿತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!